ದರೋಡೆಕೋರರು ಮಾಡಿರುವ ಕೆಲಸಕ್ಕೆ ಕುಟುಂಬವೊಂದು ಖುಷಿಯಾಗಿದೆ..!

ಆಸ್ಟ್ರೇಲಿಯಾದ ಮೆಲ್ಬೋರ್ನ್ ನಲ್ಲಿ ಮನೆಯೊಂದಕ್ಕೆನುಗ್ಗಿದ ದರೋಡೆಕೋರರು ಈ ಕುಟುಂಬ ಹೊರಗೆ ತೆರಳಿದ್ದ ಸಂದರ್ಭದಲ್ಲಿ ದರೋಡೆಕೋರರು ಹಣ, ಆಭರಣ, ಎಲೆಕ್ಟ್ರಾನಿಕ್ ಉಪಕರಣಗಳೂ ಸೇರಿದಂತೆ ಬೆಲೆ ಬಾಳುವ ವಸ್ತುಗಳನ್ನು ಹೊತ್ತೊಯ್ದಿದ್ದರು. ದರೆ ನಂತರ ದರೋಡೆಕೋರರು ಮಾಡಿರುವ ಕೆಲಸವೊಂದರ ಕಾರಣಕ್ಕೆ ಕುಟುಂಬ ಖುಷಿಯಾಗಿದೆ. ಅದೇನೂ ಅಂತೀರಾ?
ಮನೆಗೆ ನುಗ್ಗಿದ ದರೋಡೆಕೋರರು ಹಣ, ಆಭರಣ, ಎಲೆಕ್ಟ್ರಾನಿಕ್ ಉಪಕರಣಗಳೂ ಸೇರಿದಂತೆ ಬೆಲೆ ಬಾಳುವ ವಸ್ತುಗಳನ್ನು ಹೊತ್ತೊಯ್ದಿದ್ದರು. ಇದರ ಜೊತೆಗೆ ಮನೆ ಮಂದಿಗೆ ಪ್ರೀತಿಪಾತ್ರವಾಗಿದ್ದ 8 ತಿಂಗಳ ಲ್ಯಾಬ್ರೆಡಾರ್ ನಾಯಿಯನ್ನು ತೆಗೆದುಕೊಂಡು ಹೋಗಿದ್ದರು. ಈ ನಾಯಿ ಮರಿಯನ್ನು ಬಹುವಾಗಿ ಹಚ್ಚಿಕೊಂಡಿದ್ದ 4 ವರ್ಷದ ಮಗುವಿಗೆ ಆಪಾರ ದುಃಖವಾಗಿತ್ತು. ಮಗುವಿನ ನೋವು ನೋಡಲಾರದೆ ಕುಟುಂಬಸ್ಥರು ನಾಯಿ ಮರಿಯನ್ನು ಮರಳಿಸುವಂತೆ ಮಾಧ್ಯಮಗಳ ಮೂಲಕ ಕೋರಿದ್ದರು. ಇದನ್ನು ನೋಡಿದ ದರೋಡೆಕೋರರ ಮನ ಮರುಗಿದೆ. ದರೋಡೆ ಮಾಡಿದ ಮೂರು ದಿನಗಳ ಬಳಿಕ ತಾವು ಕದ್ದೊಯ್ದಿದ್ದ ನಾಯಿ ಮರಿಯನ್ನು ಮನೆ ಬಳಿ ಬಿಟ್ಟು ಹೋಗಿದ್ದಾರೆ. ಇದು ಕುಟುಂಬಸ್ಥರ ಸಂತಸಕ್ಕೆ ಕಾರಣವಾಗಿದ್ದು, ಕೃತಜ್ಞತೆ ಸಲ್ಲಿಸಿದ್ದಾರೆ. ದರೋಡೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.
Comments