ಏಳು ಮಕ್ಕಳಿಗೆ ರಾಜ್ಯ ಸರ್ಕಾರದಿಂದ ಶೌರ್ಯ ಪುರಸ್ಕಾರ

ನಗರದ ಕಬ್ಬನ್ ಉದ್ಯಾನದಲ್ಲಿರುವ ಜವಾಹರ ಬಾಲಭವನದಲ್ಲಿ ನ.14ರಂದು ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಡೆಯಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಉಮಾಶ್ರೀ ತಿಳಿಸಿದ್ದಾರೆ.
ಮಕ್ಕಳ ದಿನಾಚರಣೆ ಪ್ರಯುಕ್ತ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನೀಡುವ ಕೆಳದಿ ಚನ್ನಮ್ಮ ಹಾಗೂ ಹೊಯ್ಸಳ ಶೌರ್ಯ ಪ್ರಶಸ್ತಿಗೆ ಏಳು ಮಕ್ಕಳನ್ನು ಆತ್ಕೆ ಮಾಡಲಾಗಿದೆ. ಬಾಲಕರಿಗೆ ಹೊಯ್ಸಳ ಹಾಗೂ ಬಾಲಕಿಯರಿಗೆ ಕೆಳದಿ ಚನ್ನಮ್ಮ ಹೆಸರಿನಲ್ಲಿ ಪ್ರಶಸ್ತಿ ನೀಡಲಾಗುತ್ತಿದ್ದು ಪ್ರಶಸ್ತಿಯು 10 ಸಾವಿರ ರೂ. ನಗದು ಮತ್ತು ಪ್ರಶಸ್ತಿ ಪತ್ರ, ನೆನಪಿನ ಕಾಣಿಕೆಗಳನ್ನು ಒಳಗೊಂಡಿದೆ. ಇದರೊಡನೆ ಮಕ್ಕಳ ಕಲ್ಯಾಣ ಕೆಲಸಗಳಲ್ಲಿ ತೊಡಗಿರುವ ಸ್ವಯಂ ಸೇವಾ ಸಂಸ್ಥೆ ಮತ್ತು ವ್ಯಕ್ತಿಗಳಿಗೂ ಪ್ರಶಸ್ತಿ ನೀಡಲಾಗುತ್ತಿದೆ. ಈ ಪ್ರಶಸ್ತಿಗಳು ಸಂಸ್ಥೆಗಳಿಗೆ ರೂ.1 ಲಕ್ಷ, ವ್ಯಕ್ತಿಗಳಿಗೆ 25 ಸಾವಿರ ನಗದು ಬಹುಮಾನಗಳನ್ನು ಒಳಗೊಂಡಿದೆ.
ಶೌರ್ಯ ಪ್ರಶಸ್ತಿಗೆ ಆಯ್ಕೆಯಾದ ಮಕ್ಕಳ ವಿವರ:
ಕೆ.ಆರ್. ನಿತೀನ್, ಪುತ್ತೂರು, ದಕ್ಷಿಣ ಕನ್ನಡ, ಸಿ.ಡಿ. ಕೃಷ್ಣ ನಾಯ್ಕ, ತ್ರಿಮೂರ್ತಿ ನಗರ, ಶಿವಮೊಗ್ಗ, ವೈಶಾಖ್, ಬಂಟ್ವಾಳ, ದಕ್ಷಿಣ ಕನ್ನಡ, ಜುನೇರಾ ಹರಂಮ್, ಮುಬಾರಕ್ ಮೊಹಲ್ಲಾ, ಚಾಮರಾಜನಗರ, ಎಚ್.ಕೆ. ದೀಕ್ಷಿತಾ ಮತ್ತು ಎಚ್.ಕೆ. ಅಂಬಿಕಾ, ಶಿಡ್ಲಘಟ್ಟ, ಚಿಕ್ಕಬಳ್ಳಾಪುರ, ನೇತ್ರಾವತಿ ಚವ್ಹಾಣ, ಹುನಗುಂದ, ಬಾಗಲಕೋಟೆ.
ವಿಶೇಷ ಪ್ರಶಸ್ತಿಗೆ ಭಾಜನವಾದ ಸಂಸ್ಥೆಗಳು:
ಬೆಂಗಳೂರು ಮತ್ತಿಕೆರೆಯ ಸ್ಪರ್ಶ ಟ್ರಸ್ಟ್, ಚಾಮರಾಜನಗರದ ದೀನಬಂಧು ಸಂಸ್ಥೆ, ಬೆಳಗಾವಿಯ ಮಾಹೇಶ್ವರಿ ಅಂಧ ಮಕ್ಕಳ ಶಾಲೆ, ಬೀದರ್ನ ಅರಳು ಸಂಸ್ಥೆ
Comments