ಬಿಎಸ್ ವೈ ವಿರುದ್ಧ ಎಚ್ ಡಿಕೆ ವಾಗ್ದಾಳಿ
ರೈತರ ಹೆಸರಲ್ಲಿ ಪಾದಯಾತ್ರೆ ನಡೆಸಿ ಅಧಿಕಾರಕ್ಕೆ ಬಂದ ಬಿ ಎಸ್ ಯಡಿಯೂರಪ್ಪ ನಂತರ ರೈತರನ್ನೇ ಮರೆತುಬಿಟ್ಟರು. ಬಿಎಸ್‍ವೈಗೆ ಮಾನ ಮರ್ಯಾದೆ ಇಲ್ಲ. ಕೆಜೆಪಿ ಕಟ್ಟಿ ಟಿಪ್ಪು ಟೋಪಿ ಹಾಕಿಕೊಂಡು ಮುಸ್ಲಿಂರಿಗೂ ಅವಮಾನ ಮಾಡಿದ್ದರು ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಜೆಡಿಎಸ್ ವಿಕಾಸ ಯಾತ್ರೆ ಹಾಗೂ ಮಧು ಬಂಗಾರಪ್ಪನವರು ಆಯೋಜಿಸಿದ್ದ 'ರೈತರ ಕಣ್ಣೀರು' ಹೆಸರಿನ ಬೃಹತ್ ಜೆಡಿಎಸ್ ಸಮಾವೇಶದಲ್ಲಿ ಅವರು ಮಾತನಾಡಿದರು. ಆಪರೇಷನ್ ನಂತರ ವೈದ್ಯರು ವಿಶ್ರಾಂತಿ ತೆಗೆದುಕೊಳ್ಳಬೇಕು ಎಂದು ಹೇಳಿದ್ದರು. ಆದ್ರೆ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಬೇಕು ಎಂಬ ಕಾರಣಕ್ಕೆ ಜನರ ಮುಂದೆ ಬಂದಿದ್ದೇನೆ. ನನಗೆ ಹಣ ಮಾಡುವ ಉದ್ದೇಶವಿಲ್ಲ, ಜನರ ಕಷ್ಟಕ್ಕೆ ಸ್ಪಂದಿಸಬೇಕು, ಇದು ನನ್ನ ಜೀವನದ ಎರಡನೇ ಯಾತ್ರೆ ಎಂದರು.ಬಿಜೆಪಿಯವರು ಮಾಡುತ್ತಿರುವ ಪರಿವರ್ತನಾ ಯಾತ್ರೆ ಪ್ಲಾಫ್ ಶೋ ಎಂದು ಟೀಕಿಸಿದ ಕುಮಾರಸ್ವಾಮಿ, ಬಿಜೆಪಿಗೆ ಬಿಎಸ್‍ವೈ ಮನೆಬಿಟ್ಟು ಹೋದ ಮಗ ಇದ್ದಂತೆ. ಅವರ ಪರಿವರ್ತನಾ ಯಾತ್ರೆಗೆ ಅವರ ಪಕ್ಷದವರೇ ಕಲ್ಲು ಹೊಡೆಯುತ್ತಿದ್ದಾರೆ ಎಂದರು.
ರೈತರು ಯಾವುದೇ ಕಾರಣಕ್ಕೂ ಆತ್ಮಹತ್ಯೆ ಮಾಡಿಕೊಳ್ಳಬಾರದು, ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ಬಂದರೆ 24 ಗಂಟೆಗಳಲ್ಲಿ ರೈತರ ಎಲ್ಲಾ ಬ್ಯಾಂಕ್‍ಗಳ ಸಾಲ ಮನ್ನಾ ಮಾಡುತ್ತೇನೆ. ಇಸ್ರೇಲ್ ಮಾದರಿಯ ಕೃಷಿ ಮಾಡಬೇಕು ಎಂದು ಅಲ್ಲಿ ಅಧ್ಯಯನ ಮಾಡಿಕೊಂಡು ಬಂದಿದ್ದೇನೆ. ನಾವು ಅಧಿಕಾರಕ್ಕೆ ಬಂದರೆ ಕೃಷಿ ಚಟುವಟಿಕೆ ಸಹಾಯಧನ ನೀಡುತ್ತೇವೆ. ಮಾಜಿ ಮುಖ್ಯಮಂತ್ರಿ ದಿವಂಗತ್ ಎಸ್ ಬಂಗಾರಪ್ಪನವರ ಕನಸುಗಳನ್ನು ಸಾಕಾರಗೊಳಿಸುತ್ತೇವೆ ಎಂದು ಹೆಚ್‌ಡಿಕೆ ಭರವಸೆ ನೀಡಿದರು.
Comments