ಉಸಿರಾಡುವುದಕ್ಕೂ ಜನರಿಗೆ ಕಷ್ಟವಾಯ್ತು ರಾಷ್ಟ್ರ ರಾಜಧಾನಿ ದೆಹಲಿ
ನವದೆಹಲಿ: ದೇಶದ ರಾಜಧಾನಿ ದೆಹಲಿ ಸುತ್ತಮುತ್ತ ಪ್ರದೇಶದಲ್ಲಿ ಮಂಗಳವಾರ ಮುಂಜಾನೆ ಮಂಜು ಶೀತ ವಾತಾವರಣ ಎಂದು ಕೊಂಡ್ರೆ ಅದು ಸುಳ್ಳು. ಯಾಕಂದ್ರೆ ರಾಜ್ಯ ರಾಜಧಾನಿ ದೆಹಲಿಯಲ್ಲಿ ಹೆಚ್ಚುತ್ತಿರುವ ಮಾಲಿನ್ಯವೇ ಇದಕ್ಕೆ ಕಾರಣ.
ನವದೆಹಲಿ: ದೇಶದ ರಾಜಧಾನಿ ದೆಹಲಿ ಸುತ್ತಮುತ್ತ ಪ್ರದೇಶದಲ್ಲಿ ಮಂಗಳವಾರ ಮುಂಜಾನೆ ಮಂಜು ಶೀತ ವಾತಾವರಣ ಎಂದು ಕೊಂಡ್ರೆ ಅದು ಸುಳ್ಳು. ಯಾಕಂದ್ರೆ ರಾಜ್ಯ ರಾಜಧಾನಿ ದೆಹಲಿಯಲ್ಲಿ ಹೆಚ್ಚುತ್ತಿರುವ ಮಾಲಿನ್ಯವೇ ಇದಕ್ಕೆ ಕಾರಣ. ಬೆಳಿಗ್ಗೆಯೇ ಮಂಜು ಕವಿದ ವಾತಾವರಣ ಎಂದು ಜನರು ಭಾವಿಸಿದ್ದರು. ಆದ್ರೆ ಇದು ಮಂಜು ಕವಿದ ವಾತಾವರಣದಿಂದಲ್ಲ ಮಾಲಿನ್ಯದಿಂದ ಎಂದು ತಿಳಿದುಬಂದಿದೆ. ಇಲ್ಲಿನ ಜನರು ಉಸಿರಾಡುವುದಕ್ಕೂ ತೊಂದರೆ ಅನುಭವಿಸುವಂತಾಯ್ತು. ಇಂದು ಬೆಳಿಗ್ಗೆಯಿಂದಲೇ ಜನರು ಮನೆಯಿಂದ ಹೊರಬರಲು ಪರದಾಡು ವಂತಾಯಿತು.
ಅಲ್ಲದೇ ಅತ್ಯಂತ ಜಾಗರೂಕರಾಗಿ ಜನರು ಮನೆಯಿಂದ ಹೊರಬಂದರು. ದೆಹಲಿ ಎನ್ ಸಿಆರ್ ನಲ್ಲಿ ಅಸ್ತಮಾ ರೋಗಿಗಳು ಮನೆಯಿಂದ ಹೊರಬರಲು ಹಿಂಜರಿಯುವ ಪರಿಸ್ಥಿತಿ ಎದುರಾಗಿದೆ. ಅದಲ್ಲೇ ಮಂಜು ಕವಿದಂತೆಯೇ ಮಾಲಿನ್ಯ ಇಡೀ ರಾಜಧಾನಿಯ ಸುತ್ತ ಆವರಿಸಿಕೊಂಡಿತ್ತು. ದೆಹಲಿ ಎನ್ ಸಿಆರ್ ನಲ್ಲಿ ಮಾಲಿನ್ಯದಿಂದಾಗಿ ಮಕ್ಕಳು ಮನೆಯಿಂದ ಹೊರಬರಲು ಕಷ್ಟವಾಯಿತು. ಅಲ್ಲದೇ ದೆಹಲಿಯ ಎಲ್ಲಾ ಶಾಲೆಗಳ ಸಮಯವನ್ನು ಬದಲಾವಣೆ ಮಾಡಲು ಮನೀಷ್ ಸಿಸೋಡಿಯಾ ಕ್ರಮ ಕೈಗೊಂಡಿದ್ದಾರೆ.
Comments