ಚುನಾವಣೆಯ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯದಲ್ಲಿ ಫೇಸ್ ಬುಕ್ ...!

ಮತದಾನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸಕ್ಕೆ ಫೇಸ್ ಬುಕ್ ಮುಂದಾಗಿದೆ. ರಾಜ್ಯ ಚುನಾವಣಾ ಆಯೋಗದ ಜೊತೆ ಫೇಸ್ಬುಕ್ ಮಾತುಕತೆ ನಡೆಸಿದೆ. ಮತದಾನದ ದಿನ ಮತದಾನ ಮಾಡಲು ಜನರನ್ನು ಪ್ರೋತ್ಸಾಹಿಸುವುದು ಫೇಸ್ಬುಕ್ ಉದ್ದೇಶವಾಗಿದೆ.
ಮತಪ್ರಚಾರ ಜೋರಾಗಿ ನಡೆದಿದ್ರೂ ಮತದಾನ ಮಾಡುವವರ ಸಂಖ್ಯೆ ಕಡಿಮೆಯಾಗ್ತಿದೆ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ. ಫೇಸ್ಬುಕ್ ನ್ಯೂಸ್ ಫೀಡ್ ನಲ್ಲಿ ಮತದಾರರಿಗೆ ಫೇಸ್ಬುಕ್ ಸಂದೇಶ ರವಾನೆ ಮಾಡಲಿದೆ. ನವೆಂಬರ್ 9, ಡಿಸೆಂಬರ್ 9 ಹಾಗೂ ಡಿಸೆಂಬರ್ 14ರಂದು ಫೇಸ್ಬುಕ್ ಮತದಾನ ಮಾಡುವಂತೆ ನ್ಯೂಸ್ ಫೀಡ್ ನಲ್ಲಿ ಜನರನ್ನು ಜಾಗೃತಗೊಳಿಸುವ ಕೆಲಸ ಮಾಡಲಿದೆ. ಫೇಸ್ಬುಕ್ನ ಈ ಕೆಲಸದಿಂದ ಹಿಮಾಚಲ ಪ್ರದೇಶ ಹಾಗೂ ಗುಜರಾತ್ ಮತದಾರರು ಜಾಗೃತರಾಗಲಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಲಿದ್ದಾರೆಂದು ಫೇಸ್ಬುಕ್ ಇಂಡಿಯಾದ ಮುಖ್ಯ ಅಧಿಕಾರಿ ನಿತಿನ್ ಸಲುಜಾ ಹೇಳಿದ್ದಾರೆ.
Comments