ಬೆಂಗಳೂರಿನಲ್ಲಿ ಇಂದು ಮತ್ತು ನಾಳೆ ಮಳೆ ಬೀಳುವ ಸಾಧ್ಯತೆ
ಇಂದು ಮೋಡ ಮುಸುಕಿದ ವಾತಾವರಣದಿಂದ ಹಗುರ ಮಳೆಯಾಗಲಿದೆ. ಬೆಂಗಳೂರಿನಲ್ಲಿ ಗರಿಷ್ಠ 25 ಡಿಗ್ರಿ, ಕನಿಷ್ಠ 19 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವಿರಲಿದೆ ಎಂದು ಹವಾಮಾನ ಇಲಾಖೆ ವರದಿ ಹೇಳುತ್ತದೆ.
ನಗರದಲ್ಲಿ ಇಂದು ಸಾಯಂಕಾಲ ಕೂಡ ಮಳೆ ಸುರಿಯುವ ಸಾಧ್ಯತೆಯಿದೆ. ಇಂದು ಬೆಳಗ್ಗೆ ತುಂತುರು ಮಳೆ ಬೀಳುತ್ತಿತ್ತು. ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣವಿದ್ದು ನಾಳೆ ಕೂಡ ಇದೇ ಹವಾಮಾನ ಮುಂದುವರಿಯುವ ಸಾಧ್ಯತೆಯಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಮಳೆಯ ಲಕ್ಷಣ ಕಂಡುಬರುತ್ತಿದೆ ಎಂದು ಹವಾಮಾನ ಇಲಾಖೆ ವರದಿ ಹೇಳುತ್ತದೆ. ನಿನ್ನೆ ಅಪರಾಹ್ನ ಬೆಂಗಳೂರಿನ ಕೇಂದ್ರ ಭಾಗ, ದಾಸನಪುರ ಮತ್ತು ಆಲೂರುಗಳಲ್ಲಿ ಮಳೆಯಾಗಿದೆ. ಜಾಲಹಳ್ಳಿ, ಬಗಲೂರು, ಕೊಡಿಗೆಹಳ್ಳಿ ಮತ್ತು ಉತ್ತರ ಬೆಂಗಳೂರಿನ ಸುತ್ತಮುತ್ತಲ ಭಾಗಗಳಲ್ಲಿ ಸಾಧಾರಣ ಮಳೆಯಾಗಿದೆ.ಕೆ.ಆರ್.ಪುರಂ ಮತ್ತು ಕಾಡುಗೋಡಿಗಳಲ್ಲಿ ಕೂಡ ಸಾಧಾರಣ ಮಳೆ ಸುರಿದಿದೆ.
Comments