ವಿದ್ಯುತ್ ಖರೀದಿಯ ಗೋಲ್‌ಮಾಲ್ ಸರ್ಕಾರದ ದಾಖಲೆಯಲ್ಲೇ ಇದೆ: ಎಚ್ ಡಿಕೆ

ಬನ್ನೇರುಘಟ್ಟ ರಸ್ತೆಯ ಗೊಟ್ಟಿಗೆರೆಯಲ್ಲಿ ನಡೆದ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಗಮಿಸಿದ ಎಚ್ ಡಿಕೆಯನ್ನು ಡೊಳ್ಳುಕುಣಿತ, ವೀರಗಾಸೆ ನೃತ್ಯ ಸೇರಿದಂತೆ ಹಲವು ಕಲಾ ತಂಡಗಳಿಂದ ಸ್ವಾಗತಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಎಚ್ ಡಿಕೆ, ಇಂಧನ ಇಲಾಖೆಯ ಹಗರಣ ವಿಚಾರದಲ್ಲಿ ಕಳೆದ ಮೂರು ವರ್ಷಗಳಿಂದ ಕಾಲ ಹರಣ ಮಾಡಿ, ಕೊನೆ ಹಂತದಲ್ಲಿ ವರದಿ ಮಂಡಿಸಲು ಹೊರಟಿದ್ದಾರೆ . ವಿದ್ಯುತ್ ಖರೀದಿಯಲ್ಲಿ ಸಾವಿರಾರು ಕೋಟಿ ನಷ್ಟ ಆಗಿರೋದು ಸರ್ಕಾರದ ದಾಖಲೆಗಳಲ್ಲೇ ಇದೆ ಎಂದರು.
ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಗೊಟ್ಟಿಗೆರೆ ಮಂಜಣ್ಣ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯುತ್ತಿದ್ದು,
ಕನ್ನಡ ರಾಜ್ಯೋತ್ಸವ ಪ್ರಯುಕ್ತ ರಕ್ತದಾನ ಶಿಬಿರ, ಶಾಲಾ ಮಕ್ಕಳಿಗೆ ಪುಸ್ತಕ ವಿತರಣೆ ಸೇರಿದಂತೆ ಹಲವು ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.ಆ ದಾಖಲೆಗಳ ಆಧಾರದ ಮೇಲೆ ನಾನು ಸದನ ಸಮಿತಿಗೆ ಮಾಹಿತಿ ಕೊಟ್ಟಿದ್ದೆ. ಅವರವರ ಅನುಕೂಲಕ್ಕೆ ತಕ್ಕಂತೆ ಸದನ ಸಮಿತಿ ವರದಿ ನೀಡಲು ಹೊರಟಿದ್ದಾರೆ. ಮುಂದೆ ಅಧಿವೇಶನದಲ್ಲಿ ಸದನ ಸಮಿತಿ ವರದಿಯನ್ನು ಯಾವ ರೀತಿ ಮಂಡಿಸುತ್ತಾರೆ ಕಾದು ನೋಡೋಣ ಎಂದರು.
Comments