ಇಂಡಿಯಾ ಗೇಟ್ ಬಳಿ 50 ಬಾಣಸಿಗರು ಖಿಚಡಿ ತಯಾರಿಸಿ ದಾಖಲೆ
ನವದೆಹಲಿ: ದೆಹಲಿಯ ಇಂಡಿಯಾ ಗೇಟ್ ಬಳಿ ಇಂದು ನಡೆದ ವರ್ಲ್ಡ್ ಫುಡ್ ಇಂಡಿಯಾ ಕಾರ್ಯಕ್ರಮದಲ್ಲಿ 50 ಬಾಣಸಿಗರು ಸೇರಿ ಸುಮಾರು 1100 ಕಿ.ಲೋ ವುಳ್ಳ ಖಿಚಡಿ ತಯಾರಿಸಿ ರೆಕಾರ್ಡ್ ಮಾಡಲಾಗಿದೆ.
ನವದೆಹಲಿ: ದೆಹಲಿಯ ಇಂಡಿಯಾ ಗೇಟ್ ಬಳಿ ಇಂದು ನಡೆದ ವರ್ಲ್ಡ್ ಫುಡ್ ಇಂಡಿಯಾ ಕಾರ್ಯಕ್ರಮದಲ್ಲಿ 50 ಬಾಣಸಿಗರು ಸೇರಿ ಸುಮಾರು 1100 ಕಿ.ಲೋ ವುಳ್ಳ ಖಿಚಡಿ ತಯಾರಿಸಿ ರೆಕಾರ್ಡ್ ಮಾಡಲಾಗಿದೆ. ಈ ವೇಳೆ ಕೇಂದ್ರ ಸಚಿವ ನಿರಂಜನ್ ಜ್ಯೋತಿ ಸೇರಿದಂತೆ ಹಲವು ಗಣ್ಯರು ಖಿಚಡಿ ತಯಾರಿಸಿ ದಾಖಲೆಗೆ ಕೈ ಜೋಡಿಸಿದ್ದಾರೆ.
ಇಂಡಿಯಾ ಗೇಟ್ ಹತ್ತಿರ ನಡೆಯುತ್ತಿರುವ 'ವರ್ಲ್ಡ್ ಫುಡ್ ಇಂಡಿಯಾ' ದಲ್ಲಿ 1100 ಕಿಲೋ ಖಿಚಡಿ ತಯಾರಿಸಲಾಯ್ತು. ಇದರಲ್ಲಿ 500 ಕಿಲೋ ಅಕ್ಕಿ, 300 ಕಿಲೋ ಬೇಳೆ. 100 ಕಿಲೋ ತುಪ್ಪ. ಇನ್ನುಳಿದ ಮಸಾಲಾ ಪದಾರ್ಥಗಳನ್ನು ಸೇರಿಸಲಾಗಿತ್ತು. ಖ್ಯಾತ ಬಾಣಸಿಗ ಅಂತಲೇ ಹೆಸರು ಗಳಿಸಿರುವ ಸಂಜೀವ್ ಕಪೂರ್ ನೇತೃತ್ವದಲ್ಲಿ ಸುಮಾರು 50 ಬಾಣಸಿಗರು ಖಿಚಡಿ ತಯಾರಿಸಿ್ದ್ದಾರೆ. ಖಿಚಡಿ ತಿಂಡಿ ಭಾರತೀಯ ಸಂಸ್ಕೃತಿಯ ಒಂದು ಅವಿಭಾಜ್ಯ ಅಂಗವಾಗಿದೆ. ವಿಭಿನ್ನ ರಾಜ್ಯಗಳಲ್ಲಿ ಮತ್ತು ಪ್ರದೇಶಗಳಲ್ಲಿ ಇದನ್ನು ಸೇವಿಸಲಾಗುತ್ತದೆ.
Comments