ದುನಿಯಾ ವಿಜಯ್ ಮೇಲಿನ ಹುಚ್ಚು ಅಭಿಮಾನದಿಂದ ಕಾಲುಗಳನ್ನೇ ಕಳೆದುಕೊಂಡ ಯುವಕ

ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ವಜ್ಜಲ್ ಗ್ರಾಮದ ಯುವಕ ಹುಲಗಪ್ಪ ಅಲಿಯಾಸ್ ಜಂಗ್ಲಿ ದುನಿಯಾ ವಿಜಯ್ ಅವರ ಅಪಟ್ಟ ಅಭಿಮಾನಿ. ಅದು ಯಾವ ಮಟ್ಟಿಗೆ ಅಂದರೆ ಈತನ ಕೈ, ತೋಳ್ಮೇಲೆ ಜಂಗ್ಲಿ, ಜಾನಿ ಎಂಬ ಅಚ್ಚೆ ಇದೆ. ಮನೆಯ ಗೋಡೆಯ ತುಂಬ ನೆಚ್ಚಿನ ನಟನ ಫೋಟೋಗಳೆ ತುಂಬಿವೆ.
ಅಭಿಮಾನ ಇರಬೇಕು ಅಂದರೆ ಅದು ಅತಿರೇಕವಾಗಬಾರದು' ಎನ್ನುವ ಮಾತು ಈ ಸ್ಟೋರಿಗೆ ಸೂಕ್ತವಾಗಿ ಹೇಳಿದ ಹಾಗಿದೆ. ಯಾಕಂದ್ರೆ, ನಟ ದುನಿಯಾ ವಿಜಯ್ ಮೇಲೆ ಹುಚ್ಚು ಅಭಿಮಾನ ಹೊಂದಿದ್ದ ಯಾದಗಿರಿಯ ಒಬ್ಬ ಯುವಕ ಈಗ ತನ್ನ ಕಾಲುಗಳನ್ನೇ ಕಳೆದುಕೊಂಡಿದ್ದಾನೆ. ಇತ್ತೀಚಿಗೆ ಸ್ನೇಹಿತರ ಜೊತೆ ಹುಲಗಪ್ಪ ಕುಳಿತಿದ್ದಾಗ ''ದುನಿಯಾ ವಿಜಯ್ ಅಭಿಮಾನಿಯಾದ ನೀನು ಅವರಂತೆಯೇ ಸ್ಟಂಟ್ ಮಾಡು'' ಎಂದು ಚಾಲೆಂಜ್ ಮಾಡಿದ್ದಾರೆ. ಇದನ್ನೇ ಸವಾಲಾಗಿ ಸ್ವೀಕರಿಸಿದ ಈ ಯುವಕ ಸುಮಾರು 15 ಅಡಿ ಎತ್ತರದ ಗೋಡೆ ಮೇಲಿಂದ ಹಾರಿದ್ದಾನೆ. 15 ಅಡಿಯಿಂದ ಹಾರಿದ ಹುಲಗಪ್ಪನ ಎರಡು ಕಾಲಿನ ಪಾದದ ಮೂಳೆಗಳು ತಪ್ಪಿವೆ. ಈಗ ಎಂದಿನಂತೆ ಓಡಾಡಲು ಆಗುತ್ತಿಲ್ಲ. ಹೀಗಾಗಿ ಹಾಸಿಗೆ ಹಿಡಿದಿದ್ದು, ಹೆಚ್ಚಿನ ಚಿಕಿತ್ಸೆ ದೂರದ ಆಸ್ಪತ್ರೆಗೆ ತೆರಳಲು ಹಣವಿಲ್ಲದೇ ಸಂಕಷ್ಟ ಅನುಭವಿಸುತ್ತಿದ್ದಾನೆ. ಆಸ್ಪತ್ರೆಗೆ ತೆರಳಲು ಹಣವಿಲ್ಲದ ಹುಲಿಗಪ್ಪ ಚಿಕಿತ್ಸೆಗಾಗಿ ಹಣಕಾಸಿನ ನೆರವು ಮಾಡಿ ಎಂದು ನಟ ದುನಿಯಾ ವಿಜಯ್ ಬಳಿ ಮನವಿ ಮಾಡಿದ್ದಾನೆ.
Comments