ಕಾಂಗ್ರೆಸ್, ಬಿಜೆಪಿ ಯಾತ್ರೆಯನ್ನು ವ್ಯಂಗ್ಯ ಮಾಡಿದ ರೇವಣ್ಣ
ಶಿವಮೊಗ್ಗದಲ್ಲಿ ಗುರುವಾರ ಮಾತನಾಡಿದ ರೇವಣ್ಣ ಅವರು, ಬಿಜೆಪಿಯ 'ನವ ಕರ್ನಾಟಕ ನಿರ್ಮಾಣ ಪರಿವರ್ತನಾ ಯಾತ್ರೆ ಮತ್ತು ಮನೆ-ಮನೆಗೆ ಕಾಂಗ್ರೆಸ್ ಕಾರ್ಯಕ್ರಮವನ್ನು ಟೀಕಿಸಿದರು.
ಈ ಹಿಂದೆ ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ ಮಾಡಿದ ತಪ್ಪನ್ನು ತಿದ್ದಿಕೊಳ್ಳಲು ಬಿಜೆಪಿ ಮತ್ತು ಕಾಂಗ್ರೆಸ್ ಯಾತ್ರೆ ಮಾಡುತ್ತಿದೆ' ಎಂದು ಜೆಡಿಎಸ್ ನಾಯಕ ಎಚ್.ಡಿ.ರೇವಣ್ಣ ವ್ಯಂಗ್ಯವಾಡಿದರು.ಕಾಂಗ್ರೆಸ್ ಮತ್ತು ಬಿಜೆಪಿ ರಾಜ್ಯದಲ್ಲಿ ಅಧಿಕಾರ ನಡೆಸಿದಾಗ ಮಾಡಿದ ಪಾಪಗಳನ್ನು ತೊಳೆದುಕೊಳ್ಳಲು ಯಾತ್ರೆ ಆರಂಭಿಸಿವೆ. ಕಾಂಗ್ರೆಸ್ 4 ವರ್ಷಗಳಿಂದ ಮಾಡಿದ ಪಾಪಗಳನ್ನು ಹೇಳುವುದಕ್ಕೆ ಮನೆ-ಮನೆಗೆ ಹೋಗಬೇಕಾ? ಎಂದು ವ್ಯಂಗ್ಯವಾಡಿದರು.2018ರ ಚುನಾವಣೆಯಲ್ಲಿ ಬಿಜೆಪಿ 150ಸ್ಥಾನ, ಕಾಂಗ್ರೆಸ್ 150ಸ್ಥಾನದಲ್ಲಿ ಗೆಲುವು ಸಾಧಿಸುತ್ತೇವೆ ಎಂದು ಹೇಳಿಕೊಂಡು ಬರುತ್ತಿವೆ. ಇರುವುದು 224ಸ್ಥಾನ, ಜೆಡಿಎಸ್ ಪಕ್ಷ 113ಸ್ಥಾನಗಳಲ್ಲಿ ಗೆಲುವಿನ ಗುರಿಹೊಂದಿದೆ' ಎಂದು ರೇವಣ್ಣ ಹೇಳಿದರು.
ಯಾತ್ರೆಗೆ ಚಾಲನೆ : ಕರ್ನಾಟಕ ಬಿಜೆಪಿ 2018ರ ವಿಧಾನಸಭೆ ಚುನಾವಣೆ ಪ್ರಚಾರಕ್ಕೆ ಅಧಿಕೃತವಾಗಿ ಗುರುವಾರ ಚಾಲನೆ ನೀಡಿದೆ. 'ನವ ಕರ್ನಾಟಕ ನಿರ್ಮಾಣ ಪರಿವರ್ತನಾ ಯಾತ್ರೆ'ಗೆ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಚಾಲನೆ ನೀಡಿದರು.ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ರಾಜ್ಯದ 224 ಕ್ಷೇತ್ರಗಳಲ್ಲಿ 75 ದಿನಗಳ ಕಾಲ ಯಾತ್ರೆ ಸಂಚಾರ ನಡೆಸಲಿದೆ. ಜನವರಿ 28ರಂದು ಸಮಾರೋಪ ಸಮಾರಂಭ ಬೆಂಗಳೂರಿನಲ್ಲಿ ನಡೆಯಲಿದೆ. ಸಮಾರೋಪ ಸಮಾರಂಭದಲ್ಲಿ ನರೇಂದ್ರ ಮೋದಿ ಪಾಲ್ಗೊಳ್ಳಲಿದ್ದಾರೆ.
Comments