ಪಾಕ್ ತನ್ನದೇ ಸಮಾಧಿ ತೋಡುತ್ತಿದೆ. 20 ವಿಫಲ ರಾಷ್ಟ್ರಗಳ ಪಟ್ಟಿಯಲ್ಲಿ ಪಾಕಿಸ್ತಾನ

ನವದೆಹಲಿ: ಭಾರತ ತನ್ನ ನೆರೆ ದೇಶ ಪಾಕಿಸ್ತಾನದ ಭಯೋತ್ಪಾದನೆಯ ವಿರುದ್ಧ ಬಲವಾದ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಹೇಳುತ್ತೆ, ಭಯೋತ್ಪಾದನೆ ಬಗ್ಗೆ ಪರ ಸಮರ್ಥನೆ ನೀಡುವುದನ್ನು ನಿಲ್ಲಿಸಿ ಎಂದು ಎಚ್ಚರಿಕೆ ಸಹ ನೀಡಲಾಗುತ್ತಿದೆ.
ನವದೆಹಲಿ: ಭಾರತ ತನ್ನ ನೆರೆ ದೇಶ ಪಾಕಿಸ್ತಾನದ ಭಯೋತ್ಪಾದನೆಯ ವಿರುದ್ಧ ಬಲವಾದ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಹೇಳುತ್ತೆ, ಭಯೋತ್ಪಾದನೆ ಬಗ್ಗೆ ಪರ ಸಮರ್ಥನೆ ನೀಡುವುದನ್ನು ನಿಲ್ಲಿಸಿ ಎಂದು ಎಚ್ಚರಿಕೆ ಸಹ ನೀಡಲಾಗುತ್ತಿದೆ. ಆದ್ರೆ ಪಾಕಿಸ್ತಾನ ಮಾತ್ರ ತನ್ನದೇ ಆದ ಚಾಳಿ ಮುಂದುವರೆಸಿದೆ. ವಿಶ್ವದೆಲ್ಲೆಡೆ ಭಯೋತ್ಪಾದನೆ ಬಗ್ಗೆ ಖಂಡನೆ ವ್ಯಕ್ತವಾಗುತ್ತಿದೆ.
2017ರ ವರದಿ ಪ್ರಕಾರ , ಪಾಕಿಸ್ತಾನ 20 ವಿಫಲ ರಾಷ್ಟ್ರಗಳ ಪಟ್ಟಿಗೆ ಸೇರಿದೆ. ಹಾಗೇ ನೋಡಿದ್ರೆ ಪಾಕ್ ಈ ಬಗ್ಗೆ ಯೋಚನೆ ಮಾಡಬೇಕು. ಈಗ ವಿಶ್ವದ ಅಗ್ರ 20 ದೇಶಗಳ ರಾಜ್ಯಗಳ ಪಟ್ಟಿಯಲ್ಲಿ ಸೇರಿದ್ರು ನೆರೆರಾಷ್ಟ್ರ ಭಾರತದ ಮೇಲೆ ತನ್ನ ಭಯೋತ್ಪಾದನೆಯ ಅಸ್ತ್ರ ಉಪಯೋಗಿಸುತ್ತಿದೆ. ಈ ಮೂಲಕ ತನ್ನದೇ ಆದ ಸಮಾಧಿಯನ್ನು ತೋಡಿಕೊಳ್ಳುತ್ತಿದೆ. ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳದಂತೆ ಮತ್ತು ಅದರ ಮಣ್ಣಿನಲ್ಲಿ ಭಯೋತ್ಪಾದನೆಯನ್ನು ವಿರುದ್ಧ ಬಲವಾದ ಕ್ರಮಗಳನ್ನು ಕೈಗೊಳ್ಳುವಂತೆ ಅಮೆರಿಕಾ ಪಾಕಿಸ್ತಾನಕ್ಕೆ ಎಚ್ಚರಿಸುತ್ತಿದೆ.
Comments