ತುಳಸಿ ಪೂಜೆ ವಿಶೇಷ : ತುಳಸಿ ಆರಾಧನೆಯಿಂದ ಏನು ಉಪಯೋಗವಿದೆ ನಿಮಗೆ ಗೊತ್ತೇ?
ಆ ದಿನ ಭಗವಂತ ವಿಷ್ಣು ಹಾಗೂ ತುಳಸಿ ಪೂಜೆ ಮಾಡುವ ಸಂಪ್ರದಾಯವಿದೆ. ನಾಲ್ಕು ತಿಂಗಳುಗಳ ಕಾಲ ಮಲಗಿದ್ದ ವಿಷ್ಣು ಆ ದಿನ ಏಳುತ್ತಾನಂತೆ. ಭಗವಂತ ವಿಷ್ಣು ತುಳಸಿ ಪ್ರಿಯ. ತುಳಸಿ ಇನ್ನೊಂದು ಹೆಸರು ವೃಂದಾ. ಈಕೆ ಜಲಂಧರನ ಹೆಂಡತಿ. ವೃಂದಾ ತಪೋಶಕ್ತಿಯಿಂದ ರಾಕ್ಷಸನಾದ ಜಲಂಧರ ಶಕ್ತಿವಂತನಾಗಿದ್ದನಂತೆ.
ಈತನ ಕಿರುಕುಳ ತಾಳಲಾರದೆ ದೇವತೆಗಳು ಭಗವಂತ ವಿಷ್ಣುವಿನ ಬಳಿ ಹೋದರಂತೆ. ದೀಪಾವಳಿ ನಂತ್ರ ಬರುವ ಹಬ್ಬ ತುಳಸಿ ಪೂಜೆ. ಕಾರ್ತಿಕ ಮಾಸ ಶುಕ್ಲ ಪಕ್ಷದ 12ನೇ ದಿನ ಅಂದ್ರೆ ದ್ವಾದಶಿಯಂದು ತುಳಸಿ ಮದುವೆ ಅಥವಾ ತುಳಸಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ಬಾರಿ ನವೆಂಬರ್ 1ರಂದು ತುಳಸಿ ಮದುವೆ ಬಂದಿದೆ. ರಾಕ್ಷಸ ಯುದ್ಧದಲ್ಲಿರುವಾಗ ಆತನ ವೇಷ ಧರಿಸಿ ವೃಂದಾ ಬಳಿ ಬರುವ ವಿಷ್ಣು ಪಾತಿವ್ರತ್ಯ ಶಕ್ತಿಯನ್ನು ಭಂಗ ಮಾಡಿದನಂತೆ. ನಂತ್ರ ಜಲಂಧರ ಯುದ್ಧದಲ್ಲಿ ಮಡಿದ್ರೆ ಆತನ ಜೊತೆ ವೃಂದಾ ಕೂಡ ಬೂದಿಯಾಗ್ತಾಳೆ. ಇದಕ್ಕೂ ಮೊದಲು ವಿಷ್ಣುವಿಗೆ ಶಾಪ ನೀಡುತ್ತಾಳಂತೆ. ಆದ್ರೆ ಲಕ್ಷ್ಮಿ ಮಾತಿಗೆ ಬೆಲೆ ನೀಡಿ ಶಾಪ ವಾಪಸ್ ಪಡೆಯುತ್ತಾಳಂತೆ. ವೃಂದಾ ಬೂದಿಯಾದ ಜಾಗದಲ್ಲಿ ತುಳಸಿ ಗಿಡ ಹುಟ್ಟುತ್ತದೆಯಂತೆ. ವೃಂದಾ ಶಾಪದಿಂದ ಮುಕ್ತನಾಗುವ ವಿಷ್ಣು ತುಳಸಿಯಿಲ್ಲದೆ ನಾನು ಪ್ರಸಾದ ಸ್ಬೀಕರಿಸುವುದಿಲ್ಲ ಎನ್ನುತ್ತಾನಂತೆ.
ವಿಷ್ಣುವಿನ ಇನ್ನೊಂದು ರೂಪ ಸಾಲಿಗ್ರಾಮದ ಜೊತೆ ತುಳಸಿ ಮದುವೆ ಮಾಡಲಾಗುತ್ತದೆ.ವೃಂದಾ ತುಳಸಿಯಾಗಿ ಪಾರ್ವತಿ ತಯಾರಿಸಿದ ವನದಲ್ಲಿ ಹುಟ್ಟಿದ್ಲು ಎಂಬ ನಂಬಿಕೆಯೂ ಇದೆ. ನಂತ್ರ ರುಕ್ಮಿಣಿಯಾಗಿ ಜನ್ಮ ತಳೆದು ಕಾರ್ತಿಕ ಶುದ್ಧ ದ್ವಾದಶಿಯಂದು ಕೃಷ್ಣನನ್ನು ಮದುವೆಯಾದಳು ಎನ್ನಲಾಗುತ್ತದೆ. ಹಾಗಾಗಿ ಈ ದಿನ ತುಳಸಿ ಜೊತೆ ನೆಲ್ಲಿಕಾಯಿ ಗಿಡವನ್ನಿಟ್ಟು ಪೂಜೆ ಮಾಡುವ ಪದ್ಧತಿಯೂ ಜಾರಿಯಲ್ಲಿದೆ. ಬೇರೆ ಬೇರೆ ಪ್ರದೇಶಗಳಲ್ಲಿ ಬೇರೆ ಬೇರೆ ವಿಧದಲ್ಲಿ ತುಳಸಿ ಮದುವೆ ಮಾಡಲಾಗುತ್ತದೆ.ಹಿಂದೂ ಧರ್ಮದಲ್ಲಿ ತುಳಸಿಗೆ ಮಹತ್ವದ ಸ್ಥಾನ ನೀಡಲಾಗಿದೆ. ವಾಸ್ತುಶಾಸ್ತ್ರದಲ್ಲಿಯೂ ತುಳಸಿಯನ್ನು ವಿಶೇಷ ಸ್ಥಾನದಲ್ಲಿಡಲಾಗಿದೆ. ಪ್ರತಿದಿನ ಹಾಗೂ ತುಳಸಿ ಮದುವೆ ದಿನ ತುಳಸಿ ಪೂಜೆಯನ್ನು ಪದ್ಧತಿಯಂತೆ ಮಾಡಿದಲ್ಲಿ ಸಾಕಷ್ಟು ಫಲಗಳು ಪ್ರಾಪ್ತಿಯಾಗಲಿವೆ. ಸುಖ-ಶಾಂತಿ ಜೊತೆಗೆ ನಕಾರಾತ್ಮಕ ಶಕ್ತಿ ಮನೆ ಪ್ರವೇಶ ಮಾಡುವುದಿಲ್ಲ.
Comments