ಗಗನಕ್ಕೇರಿದ ತರಕಾರಿಬೆಲೆ 100 ದಾಟಿದೆ
ಒಂದು ತಿಂಗಳ ಹಿಂದೆ 80 ರೂಪಾಯಿಯಿದ್ದ ಕೆ.ಜಿ ಎಲೆಕೋಸಿನ ಬೆಲೆ ಈಗ 100 ರೂಪಾಯಿ ತಲುಪಿದೆ. 50 ರೂಪಾಯಿಗೆ ಸಿಗ್ತಿದ್ದ ಕ್ಯಾಪ್ಸಿಕಂ ಬೆಲೆ ಈಗ 70 ರೂಪಾಯಿಗೆ ಬಂದು ನಿಂತಿದೆ. ತರಕಾರಿ ಬೆಲೆಯಲ್ಲಿ ಹೆಚ್ಚಳವಾಗಲು ಕಾರಣ ಮಳೆ ಎನ್ನಲಾಗ್ತಿದೆ. ಕಳೆದ ಒಂದು ತಿಂಗಳಿಂದ ಸುರಿದ ಭಾರೀ ಮಳೆ ತರಕಾರಿ ಹಾಳಾಗಲು ಕಾರಣವಾಗಿದೆ.
ಇದ್ರಿಂದ ಮಾರುಕಟ್ಟೆಗೆ ಬರುವ ತರಕಾರಿ ಪ್ರಮಾಣ ಕಡಿಮೆಯಾಗಿದ್ದು ಬೆಲೆ ಏರಿದೆ. ಟೋಮೋಟೋವನ್ನು ಜನಸಾಮಾನ್ಯ ಮುಟ್ಟುವಂತಿಲ್ಲ. 22 ರೂಪಾಯಿಗೆ ಸಿಗ್ತಿದ್ದ ಕೆ.ಜಿ ಟೋಮೋಟೋ 60 ರೂಪಾಯಿಗೇರಿದೆ. ವಾರದ ಹಿಂದೆ 40 ರೂಪಾಯಿಯಿದ್ದ ಕ್ಯಾರೆಟ್ ಬೆಲೆ ಈಗ 60 ರೂಪಾಯಿಯಾಗಿದೆ. ಈರುಳ್ಳಿ ಬೆಲೆ 40-50 ರೂಪಾಯಿಗೆ ಮಾರಾಟವಾಗ್ತಿದೆ. ದಕ್ಷಿಣ ಭಾರತದಲ್ಲಿ ವಿಪರೀತ ಮಳೆಯಾಗಿದ್ದೇ ಇದಕ್ಕೆ ಮೂಲ ಕಾರಣ ಎನ್ನಲಾಗಿದೆ. ಕಳೆದ ಒಂದು ತಿಂಗಳಿಂದ ತರಕಾರಿ ಬೆಲೆ ಜನಸಾಮಾನ್ಯರ ನಿದ್ದೆಗೆಡಿಸಿದೆ. ದಿನ ದಿನಕ್ಕೂ ತರಕಾರಿ ಬೆಲೆ ಗಗನಕ್ಕೇರುತ್ತಿದೆ. ತರಕಾರಿ ಸಾಂಬಾರ್ ತಿನ್ನುವ ಬದಲು ಅನ್ನದ ಗಂಜಿ ಸಾಕು ಎನ್ನುವ ಸ್ಥಿತಿ ನಿರ್ಮಾಣವಾಗಿದೆ.
Comments