ಪ್ರಧಾನಿ ಭೇಟಿ ನೀಡುತ್ತಿರುವ ಹಿನ್ನೆಲೆ ಗ್ರಾಮದಲ್ಲಿ ಸಂಭ್ರಮದ ವಾತಾವರಣ
ಮೊದಲ ಬಾರಿಗೆ ದೇಶದ ಪ್ರಧಾನಿ ಉಜಿರೆ ಗ್ರಾಮಕ್ಕೆ ಬರುತ್ತಿರುವುದು ಅವರ ಮೇಲೆ ವಿಶೇಷ ಪ್ರೀತಿಯನ್ನುಂಟು ಮಾಡಿದೆ. ಸಾರ್ವಜನಿಕ ಸಮಾರಂಭಕ್ಕೆ ಈಗಾಗಲೇ ಬೃಹತ್ ವೇದಿಕೆ, ಸಭಾಂಗಣದ ನಿರ್ಮಾಣ ಉಜಿರೆಯಲ್ಲಿ ಭರದಿಂದ ಸಾಗುತ್ತಿದೆ. ತಾಲೂಕಿನಾದ್ಯಂತ ಸಂಭ್ರಮದ ಉಲ್ಲಾಸದ ವಾತಾವರಣ ಕಂಡು ಬರುತ್ತಿದೆ.
1977 ಮತ್ತು 1980ರಲ್ಲಿ ಇಂದಿರಾಗಾಂಧಿ, 1991ರಲ್ಲಿ ರಾಜೀವಗಾಂಧಿ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದರಾದರೂ ಆ ಸಮಯದಲ್ಲಿ ಅವರಿಬ್ಬರೂ ಹಾಲಿ ಪ್ರಧಾನಿಗಳಾಗಿರಲಿಲ್ಲ. ಆದರೆ ಅ. 29 ಕ್ಕೆ ನರೇಂದ್ರ ಮೋದಿಯವರು ಮಾತ್ರ ಹಾಲಿ ಪ್ರಧಾನಿಯಾಗಿದ್ದೇ ಧರ್ಮಸ್ಥಳ- ಉಜಿರೆಗೆ ಬರುತ್ತಿರುವುದು ತಾಲೂಕು ಮಾತ್ರವಲ್ಲದೆ ಜಿಲ್ಲೆಯ ಜನರಿಗೆ ರೋಮಾಂಚನಗೊಳಿಸಿದೆ. ಅದರಲ್ಲೂ ಯವಕಯುವತಿಯರಲ್ಲಿಅತೀವ ಸಂಭ್ರಮ ಕಂಡು ಬರುತ್ತಿದೆ. ಕಳೆದೆರಡು ದಿನಗಳಿಂದ ಉಜಿರೆಯಲ್ಲಿ ಹಬ್ಬದ ವಾತಾವರಣವಿದೆ. ಸಭಾಂಗಣದ ತಯಾರಿ ವೀಕ್ಷಿಸಲು ತಂಡೊಪತಂಡವಾಗಿ ಜನರು ಆಗಮಿಸುತ್ತಿದ್ದಾರೆ. ಸುಮಾರು 1 ಲಕ್ಷಕ್ಕೂ ಹೆಚ್ಚು ಜನರು ಸೇರುವ ನಿರೀಕ್ಷೆ ಸಂಘಟಕರದ್ದಾಗಿದೆ. ರತ್ನವರ್ಮ ಕ್ರೀಡಾಂಗಣದಲ್ಲಿ ಸಾರ್ವಜನಿಕರಿಗೆ 5 ಪ್ರವೇಶ ದ್ವಾರಗಳಿದ್ದು ಅ. 29 ರಂದು ಬೆಳಿಗ್ಗೆ 9 ಗಂಟೆಯ ಬಳಿಕ ತಪಾಸಣೆಯಾದ ಬಳಿಕ ಒಳಗೆ ಹೋಗಬಹುದಾಗಿದೆ. ಆಧಾರ್ ಕಾರ್ಡ್ ಅಥವಾ ಯಾವುದೇ ಗುರುತಿನ ಚೀಟಿ ಇರುವುದು ಅಗತ್ಯ. ಮೈದಾನದ ಯಾವುದೇ ಮೂಲೆಯಲ್ಲಿ ಕುಳಿತರೂ ಪ್ರಧಾನಿಯದರ್ಶನ ಸಾಧ್ಯವಾಗುವಂತಹ ರಚನೆ ಮಾಡಲಾಗಿದೆ. ಯಾರಿಗೂ ಬಿಸಿಲಿನ ಝಳ ತಾಗದಂತೆಯೂ ವ್ಯವಸ್ಥೆ ಮಾಡಲಾಗಿದೆ. ವಿಐಪಿ ಪಾಸ್ ಇರುವವರು ಉಜಿರೆ ಕಾಲೇಜಿನ ಎದುರು ಭಾಗದಲ್ಲಿರುವ ದ್ವಾರದಲ್ಲಿ ಪ್ರವೇಶಿಸಬಹುದಾಗಿದೆ. ವೇದಿಕೆಯ ಬಳಿ ಪಿಎಂಒ ಕಚೇರಿಯನ್ನೂ ಸ್ಥಾಪಿಸಲಾಗಿದೆ.
ಪ್ರಧಾನಿಗಳು ಸಾರ್ವಜನಿಕರ ದಿನ ನಿತ್ಯದ ಜೀವನದ ವಿಚಾರದಲ್ಲಿ ಸಂವೇದನಾಶೀಲರಾಗಿರುವುದರಿಂದ ನನ್ನ ಆಗಮನದಿಂದಾಗಿ ದೇವರ ದರ್ಶನಕ್ಕಾಗಿ ಅಥವಾ ಇತರೆ ಸಂಚಾರಕ್ಕಾಗಿ ತೊಂದರೆಯಾಗಬಾರದು ಎಂದು ಭದ್ರತಾ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ. ಶುಕ್ರವಾರ ಬೆಳಿಗ್ಗೆ- ಮಧ್ಯಾಹ್ನ ಮೂರು ಹೆಲಿಕಾಪ್ಟರ್ಗಳು ಧರ್ಮಸ್ಥದ ಹೆಲಿಪ್ಯಾಡ್ನಲ್ಲಿ ಇಳಿದಿದ್ದು ರಿಹರ್ಸಲ್ ನಡೆಸಿವೆ. ದಿಲ್ಲಿ ನೋಂದಣಿಯ ಭದ್ರತಾ ಕಾರುಗಳೂ ಧರ್ಮಸ್ಥಳದಲ್ಲಿ ಪ್ರತ್ಯಕ್ಷವಾಗಿವೆ. ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಶುಕ್ರವಾರ ಉಜಿರೆ ಕ್ರೀಡಾಂಗಣಕ್ಕೆ ಬಂದು ತಯಾರಿಗಳನ್ನು ವೀಕ್ಷಿಸಿದರು.
Comments