ವಿಧಾನಸಭೆ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಗಳ ಮೊದಲ ಫೈನಲ್ ಪಟ್ಟಿ

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಹುಮತ ಗಳಿಸಿ ಸ್ವಂತ ಬಲದ ಮೇಲೆ ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿಯಬೇಕೆಂಬ ಮಹದಾಸೆಹೊಂದಿರುವ ಜೆಡಿಎಸ್ 150 ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಿದೆ. ಜೆಡಿಎಸ್ ರಾಜ್ಯಾಧ್ಯಕ್ಷರಾದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನವೆಂಬರ್ ಮೊದಲ ವಾರದಲ್ಲಿ ಕೈಗೊಳ್ಳಲಿರುವ ಮೈಸೂರು ಪ್ರವಾಸದ ನಂತರ ಮೊದಲ ಹಂತದ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಲಾಗುತ್ತದೆ ಎಂದು ಪಕ್ಷದ ವಿಶ್ವಸನೀಯ ಮೂಲಗಳು ತಿಳಿಸಿವೆ.ರಾಜ್ಯಸಭೆ ಚುನಾವಣೆಯಲ್ಲಿ ಪಕ್ಷದ ವಿಪ್ ಉಲ್ಲಂಘಿಸಿ ಮತದಾನ ಮಾಡಿದ ಆರೋಪದ ಮೇಲೆ ಅಮಾನತುಗೊಂಡಿರುವ 7 ಮಂದಿ ಶಾಸಕರನ್ನು ಹೊರತುಪಡಿಸಿ ಉಳಿದ 33 ಮಂದಿ ಶಾಸಕರಿಗೆ ಟಿಕೆಟ್ ನೀಡಲು ಉದ್ದೇಶಿಸಲಾಗಿದೆ.
ಅಮಾನತುಗೊಂಡಿರುವ ಶಾಸಕರ ಕ್ಷೇತ್ರಗಳಲ್ಲಿ ಪರ್ಯಾಯ ಅಭ್ಯರ್ಥಿಗಳನ್ನು ಸಿದ್ದಪಡಿಸಲಾಗುತ್ತಿದೆ. ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರು ಮೊದಲ ಹಂತದ ಅಭ್ಯರ್ಥಿಗಳ ಪಟ್ಟಿಯನ್ನು ಈಗಾಗಲೇ ಅಂತಿಮಗೊಳಿಸಿದ್ದು, ಪ್ರಕಟಣೆ ಮಾತ್ರ ಬಾಕಿ ಉಳಿದಿದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ. ಆದರೂ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಿಂದ ಮಾಜಿ ಶಾಸಕಿ ಅನಿತಾ ಕುಮಾರಸ್ವಾಮಿ, ಬೇಲೂರು ವಿಧಾನಸಭಾ ಕ್ಷೇತ್ರದಿಂದ ರೇವಣ್ಣ ಅವರ ಪುತ್ರ ಪ್ರಜ್ವಲ್ ರೇವಣ್ಣ ಅವರ ಹೆಸರುಗಳು ಕೇಳಿ ಬರುತ್ತಿವೆ.
ರಾಮನಗರ ವಿಧಾನಸಭಾ ಕ್ಷೇತ್ರದಿಂದ ಕುಮಾರಸ್ವಾಮಿ, ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದಿಂದ ಮಾಜಿ ಸಚಿವ ಎಚ್.ಡಿ.ರೇವಣ್ಣ ಮಾತ್ರ ಸ್ಪರ್ಧಿಸಲಿದ್ದಾರೆ ಎಂದು ಗೌಡರು ಸ್ಪಷ್ಟಪಡಿಸಿದ್ದರು. ಬೇಲೂರು ಕ್ಷೇತ್ರಕ್ಕೆ ರೇವಣ್ಣ ಅವರ ಪತ್ನಿ ಹಾಗೂ ಹಾಸನ ಜಿಲ್ಲಾ ಪಂಚಾಯ್ತಿ ಸದಸ್ಯೆ ಭವಾನಿ ರೇವಣ್ಣ ಅವರ ಹೆಸರು ಕೂಡ ಕೇಳಿ ಬರುತ್ತಿದೆ. ಅಂತಿಮವಾಗಿ ಯಾರನ್ನು ಕಣಕ್ಕಿಳಿಸುತ್ತಾರೆ ಎಂಬುದನ್ನು ಕಾದು ನೋಡಬೇಕು.ಪ್ರಜ್ವಲ್ ರೇವಣ್ಣ ಅವರನ್ನು ಹಾಸನ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸುವ ಅಪೇಕ್ಷೆಯನ್ನು ದೇವೇಗೌಡರು ಹೊಂದಿದ್ದಾರೆ.
ವಿಧಾನಸಭಾ ವಾರು ಲಭ್ಯವಿರುವ ಸಂಭವನೀಯ ಅಭ್ಯರ್ಥಿಗಳ ಪಟ್ಟಿ ಈ ಕೆಳಕಂಡಂತಿದೆ.
ಕೆ.ಆರ್.ಪೇಟೆ – ನಾರಾಯಣಗೌಡ;ಅರಸೀಕೆರೆ – ಕೆ.ಎಂ.ಶಿವಲಿಂಗೇಗೌಡ;ಶ್ರವಣಬೆಳಗೊಳ – ಸಿ.ಎನ್.ಬಾಲಕೃಷ್ಣ;ಹಾಸನ – ಎಚ್.ಎಸ್.ಪ್ರಕಾಶ್;ಸಕಲೇಶಪುರ – ಎಚ್.ಕೆ.ಕುಮರಸ್ವಾಮಿ;ಹೆಗ್ಗಡದೇವನಕೋಟೆ – ಎಸ್.ಚಿಕ್ಕಮಾದು;ಚಾಮುಂಡೇಶ್ವರಿ – ಜಿ.ಟಿ.ದೇವೇಗೌಡ;ಮಾಲೂರು – ಕೆ.ಎಸ್.ಮಂಜುನಾಥಗೌಡ;ಮಹಾಲಕ್ಷ್ಮಿಲೇಔಟ್ – ಕೆ.ಗೋಪಾಲಯ್ಯ;ದೇವನಹಳ್ಳಿ – ಪಿಳ್ಳಮುನಿಸ್ವಾಮಪ್ಪ;ನೆಲಮಂಗಲ – ಡಾ.ಕೆ.ಶ್ರೀನಿವಾಸಮೂರ್ತಿ;ಮದ್ದೂರು – ಡಿ.ಸಿ.ತಮ್ಮಣ್ಣ;ನಾಗಮಂಗಲ – ಸುರೇಶ್‍ಗೌಡ;
ಬಸವಕಲ್ಯಾಣ – ಮಲ್ಲಿಕಾರ್ಜುನ ಕೂಬ;ನವಲಗುಂದ – ಎನ್. ಎಚ್.ಕೋನರೆಡ್ಡಿ;ಹರಿಹರ -ಎಚ್.ಎಸ್.ಶಿವಶಂಕರ್;
ಶಿವಮೊಗ್ಗ ಗ್ರಾಮಾಂತರ – ಶಾರದಾಪೂರ್ಯಾ ನಾಯಕ್;ಸೊರಬ – ಎಸ್.ಮಧುಬಂಗಾರಪ್ಪ;ಭದ್ರಾವತಿ – ಎಂ.ಜೆ.ಅಪ್ಪಾಜಿ;
ಮೂಡಿಗೆರೆ – ಬಿ.ಬಿ.ನಿಂಗಯ್ಯ;ಕಡೂರು – ವೈ.ಎಸ್.ವಿ.ದತ್ತ;ಚಿಕ್ಕನಾಯಕನಹಳ್ಳಿ – ಸಿ.ಬಿ.ಸುರೇಶ್‍ಬಾಬು;ತುರುವೇಕೆರೆ – ಎಂ.ಕೃಷ್ಣಪ್ಪ ;ಕುಣಿಗಲ್ – ಡಿ.ನಾಗರಾಜಯ್ಯ;ಕೊರಟಗೆರೆ – ಪಿ.ಆರ್.ಸುಧಾಕರ್‍ಲಾಲ್;ಗುಬ್ಬಿ – ಎಸ್.ಆರ್.ಶ್ರೀನಿವಾಸ್ (ವಾಸು);ಪಾವಗಡ – ತಿಮ್ಮರಾಯಪ್ಪ ;ಶಿಡ್ಲಘಟ್ಟ – ಎಂ.ರಾಜಣ್ಣ ;ಚಿಂತಾಮಣಿ – ಎಂ.ಕೃಷ್ಣಾರೆಡ್ಡಿ ;ಯಶವಂತಪುರ – ಟಿ.ಎನ್.ಜಯವರಾಯಿಗೌಡ;ರಾಜರಾಜೇಶ್ವರಿನಗರ – ಆರ್.ಪ್ರಕಾಶ್;ರಾಜಾಜಿನಗರ – ಎಸ್.ಟಿ.ಆನಂದ್;ಗಾಂಧಿನಗರ – ನಾರಾಯಣಸ್ವಾಮಿ;ಬ್ಯಾಟರಾಯನಪುರ – ಚಂದ್ರು ;ಹೆಬ್ಬಾಳ – ಹನುಮಂತೇಗೌಡ;ಬಸವನಗುಡಿ – ಬಾಗೇಗೌಡ;ಪದ್ಮನಾಭವನಗರ – ವಿ.ಕೆ.ಗೋಪಾಲ್ ;ಸರ್ವಜ್ಞನಗರ – ಡಾ.ಅನ್ವರ್ ಶರೀಫ್;ಬಿ.ಟಿ.ಎಂ.ಲೇಔಟ್ – ದೇವದಾಸ್;ಜಯನಗರ – ರವಿಕುಮಾರ್;ಯಲಹಂಕ – ಕೃಷ್ಣಪ್ಪ ;ದಾಸರಹಳ್ಳಿ – ಇ.ಕೃಷ್ಣಪ್ಪ- ಗನ್‍ಮ್ಯಾನ್ ಮಂಜುನಾಥ್;
ಮಹದೇವಪುರ – ಸತೀಶ್;ಚಾಮರಾಜ – ನಿವೃತ್ತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ;ಮೇಲುಕೋಟೆ – ಸಂಸದ ಸಿ.ಎಸ್.ಪುಟ್ಟರಾಜು;ಮಾಗಡಿ – ಎ.ಮಂಜು;ಶ್ರೀರಂಗಪಟ್ಟಣ – ರವೀಂದ್ರ ಶ್ರೀಕಂಠಯ್ಯ ;ಹುಣಸೂರು – ಮಾಜಿ ಸಂಸದ ಎಚ್.ವಿಶ್ವನಾಥ್ ;ತುಮಕೂರು ಗ್ರಾಮಾಂತರ – ಗೌರಿಶಂಕರ್ ;ಬೀದರ್ ದಕ್ಷಿಣ – ಬಂಡೆಪ್ಪ ಕಾಶಂಪೂರ್;ಮಳವಳ್ಳಿ – ಡಾ.ಅನ್ನದಾನಿ ;ಶೃಂಗೇರಿ – ಮಾಜಿ ಸಚಿವ ಗೋವಿಂದೇಗೌಡರ ಪುತ್ರ ವೆಂಕಟೇಶ್;ಹಿರಿಯೂರು – ಚಿತ್ರದುರ್ಗ ಜಿಲ್ಲಾಧ್ಯಕ್ಷ ಯಶೋಧರ್;ಚನ್ನಗಿರಿ – ಊದಿಗೆರೆ ರಮೇಶ್;ಮಾಯಕೊಂಡ – ಶೀಲಾ ನಾಯಕ್;ಶಿರಸಿ -ಶಶಿ ಭೂಷಣ್ ಹೆಗಡೆ;
ಅರಕಲಗೂಡು – ಎ.ಟಿ.ರಾಮಸ್ವಾಮಿ;ಮಡಿಕೇರಿ – ಜಿ.ವಿಜಯ;ಪಿರಿಯಾಪಟ್ಟಣ – ಮಹದೇವ್;ಕೆ.ಜಿ.ಎಫ್ – ರಾಜೇಂದ್ರ;
ಮಧುಗಿರಿ – ವೀರಭದ್;ಶಿಗ್ಗಾಂವ್ – ಅಶೋಕ್ ಬೇವಿನ ಮರದ;ಕುಂದಗೋಳ – ಎಂ.ಎಸ್.ಅಕ್ಕಿ;ಹುಬ್ಬಳ್ಳಿ -ಧಾರವಾಡ ಕೇಂದ್ರ – ರಾಜಣ್ಣ ಕೊರವಿ;ಹುಬ್ಬಳ್ಳಿ-ಧಾರವಾಡ ಪೂರ್ವ – ಮಾಜಿ ಸಚಿವ ಹನುಮಂತಪ್ಪ ಅಲ್ಕೋಡ್;ಹುಬ್ಬಳ್ಳಿ-ಧಾರವಾಡ ಪಶ್ಚಿಮ -ಅಲ್ತಾಫ್‍ಕಿತ್ತೂರ್/ಗುರುರಾಜ್ ಹುಣಸಿಮರದ್;ಬೈಲಹೊಂಗಲ – ಶಂಕರ ಮಾರಡಗಿ;ಸಿಂಧಗಿ-ಎಂ.ಸಿ.ಮನಗುಳಿ;ದೊಡ್ಡಬಳ್ಳಾಪುರ– ಬಿ.ಮುನೇಗೌಡ;ಶಹಪುರ – ಅಮೀನ್‍ರೆಡ್ಡಿ ಅವರಿಗೆ ಬಹುತೇಕ ಟಿಕೆಟ್ ದೊರೆಯುವುದು ಖಾತ್ರಿಯಾಗಿದೆ.
Comments