'ರಾಧೆ ಮಾ' ಡ್ಯಾನ್ಸ್
ಉತ್ತರಪ್ರದೇಶ : ಹತ್ತು ಹಲವು ವಿವಾದಗಳನ್ನು ಮೈಮೇಲೆ ಹಾಕಿಕೊಂಡು ಸುದ್ದಿಯಾಗುವ ಸ್ವಯಂ ಘೋಷಿತ ದೇವ ಮಹಿಳೆ ರಾಧೆ ಮಾ ಒಂದು ಸಮಾರಂಭದಲ್ಲಿ ಭರ್ಜರಿ ಆಗಿ ಡ್ಯಾನ್ಸ್ ಮಾಡುವುದರ ಮೂಲಕ ಜನರು ಬೆರಗಾಗುವಂತೆ ಮಾಡಿದ್ದಾರೆ.
ಉತ್ತರಪ್ರದೇಶ : ಹತ್ತು ಹಲವು ವಿವಾದಗಳನ್ನು ಮೈಮೇಲೆ ಹಾಕಿಕೊಂಡು ಸುದ್ದಿಯಾಗುವ ಸ್ವಯಂ ಘೋಷಿತ ದೇವ ಮಹಿಳೆ ರಾಧೆ ಮಾ ಒಂದು ಸಮಾರಂಭದಲ್ಲಿ ಭರ್ಜರಿ ಆಗಿ ಡ್ಯಾನ್ಸ್ ಮಾಡುವುದರ ಮೂಲಕ ಜನರು ಬೆರಗಾಗುವಂತೆ ಮಾಡಿದ್ದಾರೆ. ಉತ್ತರಪ್ರದೇಶ ಸಂಬಲ್ ನಲ್ಲಿ ನಡೆದಿರುವ ಸಿನಿಮಾ ಮಹೋತ್ಸವದಲ್ಲಿ ರಾಧೆ ಮಾ ಭರ್ಜರಿ ಆಗಿ ಡ್ಯಾನ್ಸ್ ಮಾಡಿದ್ದಾಳೆ. ಮಸ್ತ ಕಲಂದರ್ ಸೇರಿದಂತೆ ಅನೇಕ ಹಾಡುಗಳಿಗೆ ರಾಧೆ ಮಾ ಹೆಜ್ಜೆ ಹಾಕಿದ್ದಾರೆ. ಈ ವೇಳೆ ಮಾಧ್ಯಮದವರ ಜತೆ ಮಾತನಾಡಿರುವ ಅವರು , ಸಿನಿಮಾ ಮಹೋತ್ಸವಕ್ಕೆ ನನ್ನನ್ನು ಆಹ್ವಾನಿಸಲಾಗಿತ್ತು , ಆದ ಕಾರಣ ಬಂದಿದ್ದೇನೆ ಎಂದರು.
ಇದೇ ವೇಳೆ ಭಕ್ತರು ತಮ್ಮ ಮೇಲೆ ಹೇಗೆಲ್ಲಾ ಮುನಿಸಿಕೊಳ್ತಾರೆ ಎಂಬುದಕ್ಕೆ ಸೂಕ್ತ ಉದಾಹರಣೆ ನೀಡಿರುವ ರಾಧೆ ಮಾ, 'ನಾನು ಯಾವುದಾದ್ರು ಕೆಲಸ ಮಾಡಿಲ್ಲ ಎಂದಾಗ ಜನರು ನನ್ನ ಮೇಲೆ ಮುನಿಸಿಕೊಳ್ತಾರೆ. ನಾನು ಇಲ್ಲಿ ದೊಡ್ಡ ಮಂದಿರ ನಿರ್ಮಾಣ ಮಾಡುತ್ತೇನೆ'. 'ಅಸಲಿ ಸನ್ಯಾಸಿಗಳು ಯಾರಿಂದಲು ಏನನ್ನು ಬಯಸುವುದಿಲ್ಲ. ನನಗೆ ಯಾರು ಭಕ್ತರಿಲ್ಲ, ಯಾರು ನನ್ನನ್ನು ಪ್ರೀತಿ ಯಿಂದ ಕಾಣುತ್ತಾರೋ ಅಂಥವರನ್ನು ಭಕ್ತರೆಂದು ಪರಿಗಣಿಸುತ್ತೇನೆ'. 'ತಾಯಿ ಹೃದಯವನ್ನು ನೋವಿಸಬಾರದು ಎಂದು ರಾಧೆ ಮಾ' ಹೇಳಿಕೊಂಡಿದ್ದಾರೆ.
Comments