ಮೊಗ್ಗಿನ ಜಡೆ ವಿಚಾರಕ್ಕೆ ಮುರಿದು ಬಿದ್ದ ಮದುವೆ
ಚಿಕ್ಕಬಳ್ಳಾಪುರ : ವಧುವಿನ ಮೊಗ್ಗಿನ ಜಡೆ ಸರಿಯಾಗಿಲ್ಲ ಎಂಬ ಕಾರಣಕ್ಕೆ ಮದುವೆಯೇ ಮುರಿದು ಬಿದ್ದಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಭೀಮಾಕನಹಳ್ಳಿಯಲ್ಲಿ ನಡೆದಿದೆ.
ಆದರೆ ವರನ ಕಡೆಯವರು ಮೊಗ್ಗಿನ ಜಡೆ ಸರಿ ಇಲ್ಲ, ಬೇರೆ ಬೇರೆ ಹೂಗಳನ್ನು ಹಾಕಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ಈ ನಡುವೆ ಇದಕ್ಕಿದ್ದಂತೆ ವಧುವಿನ ಕಡೆಯವರು ವಧುವಿನೊಂದಿಗೆ ಕಾರಿನಲ್ಲಿ ಹೊರಟುಹೋಗಿದ್ದಾರೆ.ಈ ಘಟನೆಯಿಂದ ವಿಚಲಿತರಾದ ವರನಿಗೆ ಅದೇ ಕಲ್ಯಾಣ ಮಂಟಪದಲ್ಲಿ ಬೇರೊಂದು ಹುಡುಗಿಯ ಜೊತೆ ಮಾಡಲು ಹುಡುಗಿಗಾಗಿ ಹುಡುಕಾಟ ನಡೆಸಿದ್ದಾರೆ.
Comments