ಬ್ಯುಟಿ ಪಾರ್ಲರ್ ಗೆ ಹೋಗೋ ಮುನ್ನ ಮಹಿಳೆಯರೇ ಒಮ್ಮೆಈ ಸ್ಟೋರಿ ಓದಿ ...!

ಬೆಂಗಳೂರಿನ ಪಟ್ಟೇಗಾರಪಾಳ್ಯದ ನಿವಾಸಿ ಲಕ್ಷ್ಮೀ ಎಂಬವರು ಇದೇ ಏರಿಯಾದಲ್ಲಿರುವ ಮಮತಾ ಬ್ಯೂಟಿ ಪಾರ್ಲರ್ ನಲ್ಲಿ ವ್ಯಾಕ್ಸ್ ಮಾಡಿಸಿಕೊಂಡಿದ್ದಾರೆ. ಬ್ಯೂಟಿಶಿಯನ್ ವ್ಯಾಕ್ಸ್ ಮಾಡಿರೋ ಪರಿಣಾಮ ಕಂಕುಳಿನ ಭಾಗ ಸಂಪೂರ್ಣ ಸುಟ್ಟು ಹೋಗಿದೆ. ಹೀಗಾಗಿ ಲಕ್ಷ್ಮೀ ಅವರು ಬ್ಯೂಟಿ ಪಾರ್ಲರ್ ನಲ್ಲಿ ಆದ ಸಮಸ್ಯೆ ಬಗ್ಗೆ ಫೇಸ್‍ಬುಕ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಬ್ಯೂಟಿ ಪಾರ್ಲರ್ ನಲ್ಲಿ ವ್ಯಾಕ್ಸ್, ಫೇಶಿಯಲ್ ಅಂತೆಲ್ಲಾ ಮಾಡಿಸೋಕೆ ಹೋಗುವ ಯುವತಿಯರು, ಮಹಿಳೆಯರು ಎಚ್ಚರವಾಗಿರಬೇಕು. ಸೌಂದರ್ಯ ಹೆಚ್ಚಿಸಬೇಕು ಎಂದು ಬ್ಯೂಟಿ ಪಾರ್ಲರ್ ಗೆ ಹೋದ್ರೆ ನಿಮ್ಮ ಅಂದ ಶಾಶ್ವತವಾಗಿ ಮಾಯವಾಗಬಹುದು. ಬೆಂಗಳೂರಿನ ಪಟ್ಟೇಗಾರಪಾಳ್ಯದ ನಿವಾಸಿ ಲಕ್ಷ್ಮೀ ಎಂಬವರು ಇದೇ ಏರಿಯಾದಲ್ಲಿರುವ ಮಮತಾ ಬ್ಯೂಟಿ ಪಾರ್ಲರ್ ನಲ್ಲಿ ವ್ಯಾಕ್ಸ್ ಮಾಡಿಸಿಕೊಂಡಿದ್ದಾರೆ. ಬ್ಯೂಟಿಶಿಯನ್ ವ್ಯಾಕ್ಸ್ ಮಾಡಿರೋ ಪರಿಣಾಮ ಕಂಕುಳಿನ ಭಾಗ ಸಂಪೂರ್ಣ ಸುಟ್ಟು ಹೋಗಿದೆ. ಹೀಗಾಗಿ ಲಕ್ಷ್ಮೀ ಅವರು ಬ್ಯೂಟಿ ಪಾರ್ಲರ್ ನಲ್ಲಿ ಆದ ಸಮಸ್ಯೆ ಬಗ್ಗೆ ಫೇಸ್‍ಬುಕ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಘಟನೆ ಬಗ್ಗೆ ಕರ್ನಾಟಕ ಬ್ಯೂಟಿ ಪಾರ್ಲರ್ ಆಸೋಸಿಯೇಷನ್ ಅಧ್ಯಕ್ಷೆ ಕೂಡ ಕಿಡಿ ಕಾರಿದ್ದಾರೆ. ಇತ್ತೀಚಿನ ದಿನಗಳಲ್ಲಿ ಬ್ಯೂಟಿ ಪಾರ್ಲರ್ ಗೆ ಸಂಬಂಧಿಸಿದ ದೂರುಗಳು ಹೆಚ್ಚಾಗುತ್ತಿದ್ದು, ವ್ಯಾಕ್ಸ್ ಮಾಡಿ ಕೈ ಸುಡೋದು, ಹೇರ್ ಸ್ಟೈಲ್ ಮಾಡೋಕೆ ಹೋಗಿ ಇರೋ ಬರೋ ಕೂದಲನ್ನು ಕತ್ತರಿಸೋದು, ಐಬ್ರೋ ಮಾಡೋದಕ್ಕೆ ಹೋಗಿ ಚರ್ಮವನ್ನೇ ಕೀಳೋದು ಹೀಗೆ ದೂರಿನ ಸರಮಾಲೆಯೇ ಬರುತ್ತಿದೆಯಂತೆ. ಒಟ್ಟಾರೆ ಇರೋ ಸೌಂದರ್ಯದ ಜೊತೆಗೆ ಮತ್ತಷ್ಟು ಸೌಂದರ್ಯ ಹೆಚ್ಚಿಸಲು ಹೋಗುವ ಹುಡುಗಿಯರು ಇನ್ನು ಮುಂದೆಯಾದ್ರೂ ಹುಷಾರಾಗಿದ್ದರೆ ಒಳಿತು.
Comments