ರಾಷ್ಟ್ರಪತಿ ಕೋವಿಂದ್ ದೇವೇಗೌಡರಿಗೆ ಕರೆ ಮಾಡಿ ಕ್ಷಮೆ ಯಾಚಿಸಿದ್ದೇಕೆ?

26 Oct 2017 3:07 PM | General
2354 Report

ದೆಹಲಿಗೆ ತೆರಳಿದ ಮೇಲೆ ಮಾಜಿ ಪ್ರಧಾನಿ ದೇವೇಗೌಡರಿಗೆ ದೂರವಾಣಿ ಕರೆ ಮಾಡಿದ ರಾಷ್ಟ್ರಪತಿ ಕೋವಿಂದ್ ಆರೋಗ್ಯ ವಿಚಾರಿಸಿದ್ದಲ್ಲದೆ, ಭಾಷಣದಲ್ಲಿ ಕಣ್ತಪ್ಪಿನಿಂದ ಹೆಸರು ಬಿಟ್ಟು ಹೋಗಿದ್ದಕ್ಕೆ ಕ್ಷಮೆ ಕೋರಿದರು.

ವಿಧಾನಸೌಧದ ಸುವರ್ಣ ಮಹೋತ್ಸವದ ಅಂಗವಾಗಿ ಅಧಿವೇಶನದಲ್ಲಿ ಭಾಷಣ ಮಾಡುವಾಗ ದೇವೇಗೌಡರ ಹೆಸರನ್ನು ಕೈ ಬಿಟ್ಟಿದ್ದಕ್ಕೆ ನೆನಪಿಸಿಕೊಂಡಿದ್ದ ರಾಷ್ಟ್ರಪತಿ ಕೋವಿಂದ್ ದೆಹಲಿಗೆ ತೆರಳಿದ ಮೇಲೂ ದೇವೇಗೌಡರನ್ನು ಸ್ಮರಿಸಿಕೊಂಡಿದ್ದಾರೆ. ಇದಕ್ಕೆ ಗೌಡರೂ ಈ ಘಟನೆಯನ್ನು ನಾನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಹೇಳಿದ್ದಾರೆ ಎನ್ನಲಾಗಿದೆ. ಅಧಿವೇಷನದ ಭಾಷಣದಲ್ಲಿ ದೇವೇಗೌಡರ ಹೆಸರಿರಲಿಲ್ಲ. ಸ್ವತಃ ರಾಷ್ಟ್ರಪತಿ ಕೋವಿಂದ್ ದೇವೇಗೌಡರನ್ನು ಸ್ಮರಿಸಿಕೊಂಡು, ಗೌಡರು ತಮ್ಮ ಸ್ನೇಹಿತರು ಎಂದಿದ್ದರು.

Edited By

Shruthi G

Reported By

Shruthi G

Comments