ಮಠದ ಸ್ವಾಮೀಜಿಯ ಕಾಮ ಪುರಾಣ

ಮಠದ ಹಾಲಿ ಪೀಠಾಧಿಪತಿಯಾಗಿರುವ ಶೀವಾಚರ್ಯ ಸ್ವಾಮೀಜಿ ಪುತ್ರನಾಗಿರುವ ದಯಾನಂದ ಎಂಬಾತ ರಾಸಲೀಲೆಯಲ್ಲಿ ತೊಡಗಿರುವ ದೃಶ್ಯಗಳ ವಿಡಿಯೋಗಳು ಮಾಧ್ಯಮಗಳಲ್ಲಿ ಬಿತ್ತರವಾಗಿವೆ. ಮಠದ ಕೋಣೆಯಲ್ಲೇ ರಾಸಲೀಲೆ ನಡೆಸಿದ್ದಾನೆ ಎಂದು ಹೇಳಲಾಗಿದೆ.
ನಗರದ ಯಲಹಂಕದಲ್ಲಿರುವ ಶತಮಾನಗಳಷ್ಟು ಇತಿಹಾಸ ಹೊಂದಿರುವ ಮದ್ದೇವಣಾಪುರ ಮಹಾದೇವ ಸಂಸ್ಥಾನ ಮಠದ ಉತ್ತರಾಧಿಕಾರಿ ಎಂದು ಬಿಂಬಿತವಾಗಿದ್ದ ಗುರುನಂಜೇಶ್ವರ ಸ್ವಾಮೀಜಿ ನಟಿಯೊಬ್ಬಳೊಂದಿಗೆ ರಾಸಲೀಲೆಯಲ್ಲಿ ತೊಡಗಿರುವ ವಿಡಿಯೋ ಬಹಿರಂಗವಾಗಿ ಭಾರೀ ಸದ್ದು ಮಾಡಿದೆ. ವೀರಶೈವ ಪರಂಪರೆಯ ಮಠಕ್ಕೆ ಶಿವಾಚಾರ್ಯ ಶ್ರೀಗಳು 2011ರಲ್ಲಿ ಉತ್ತರಾಧಿಕಾರಿಯನ್ನಾಗಿ ತನ್ನ ಪುತ್ರ ದಯಾನಂದನ್ನೇ ನೇಮಕಮಾಡಿಕೊಂಡಿದ್ದರು. ಕೋಟ್ಯಂತರ ರೂಪಾಯಿ ಆಸ್ತಿಯ ಮೇಲೆ ಕಣ್ಣಿಟ್ಟು ಮಗನಿಗೆ ಪಟ್ಟ ಕಟ್ಟಿದ್ದರು ಎಂದು ಭಕ್ತರು ತೀವ್ರ ಆಕ್ರೋಶ ವ್ಯಕ್ತ ಪಡಿಸಿದ್ದರು ಎಂದು ತಿಳಿದು ಬಂದಿದೆ.
ಇದೀಗ ದಯಾನಂದನ ವಿರುದ್ಧ ಭಕ್ತರು ಆಕ್ರೋಶ ವ್ಯಕ್ತಪಡಿಸಿ ಹೋರಾಟಕಿದ್ದಿದ್ದು, ತಕ್ಷಣ ಮಠ ಬಿಟ್ಟು ತೆರಳಿ ಬೇರೆ ಸಭ್ಯ ಉತ್ತರಾಧಿಕಾರಿಯನ್ನು ನೇಮಿಸಬೇಕು, ಶ್ರೀಶೈಲ ಶಾಖಾ ಪೀಠದ ಶ್ರೀಗಳು ಮಠಕ್ಕೆ ಆಗಮಿಸಿ ಮಾತುಕತೆ ನಡೆಸಬೇಕು ಎಂದು ಪಟ್ಟು ಹಿಡಿದಿದ್ದಾರೆ.
Comments