ಚುನಾವಣೆಯಲ್ಲಿ ಜೆಡಿಎಸ್ ಗೆಲ್ಲೋದು ಖಚಿತ : ದೇವೇಗೌಡ್ರು
ರಾಜ್ಯದಲ್ಲಿ ಜೆಡಿಎಸ್ ಜೀವಂತವಾಗಿದೆ, ಪಕ್ಷ ಇನ್ನಷ್ಟು ಬಲಗೊಳ್ಳುತ್ತದೆ. ಪಿಜಿಆರ್ ಸಿಂಧ್ಯಾ ಮತ್ತೆ ನಮ್ಮೊಂದಿಗೆ ಬರುತ್ತಾರೆ.ಆದರೆ ಚುನಾವಣೆ ಸಮೀಕ್ಷೆ ಬಗ್ಗೆ ಯಾವುದೇ ಪ್ರತಿಕ್ರಿಯೆ ನಾನು ನೀಡಲ್ಲ ಎಂದು ಮಾಜಿ ಪ್ರಧಾನಿ ಹೆಚ್ಡಿ. ದೇವೇಗೌಡ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.
ಸಿದ್ದರಾಮಯ್ಯ ಹಿಂದೆ ದೇವರ ನಂಬುತ್ತಿರಲಿಲ್ಲ, ಈಗ ಪೂಜೆ ಮಾಡುತ್ತಿದ್ದಾರೆ ಅವರೀಗ ಸಂಪೂರ್ಣ ಬದಲಾಗಿದ್ದಾರೆ. ನೋಟು ನಿಷೇಧಕ್ಕೆ ಒಂದು ವರ್ಷವಾಯಿತು. ನವೆಂಬರ್ ೮ ರಂದು ನಾವೂ ಪ್ರತಿಭಟನೆ ಮಾಡುತ್ತೇವೆ.ಪ್ರಧಾನಿಮೋದಿ ಅವರು ಚುನಾವಣಾ ಆಯೋಗ, ಆರ್ ಬಿಐ, ಸಿಬಿಐ ಎಲ್ಲವನ್ನೂ ನಿಯಂತ್ರಣ ದಲ್ಲಿಟ್ಟುಕೊಂಡಿದ್ದಾರೆ. ಮೆಕ್ಕೆಜೋಳಕ್ಕೆ ಸೂಕ್ತ ಬೆಲೆ ಮತ್ತು ಪರಿಹಾರ ನೀಡುವಂತೆ ರಾಜ್ಯ, ಕೇಂದ್ರ ಸರಕಾರಕ್ಕೆ ಒತ್ತಾಯ ಮಾಡಬೇಕು. ಇಲ್ಲವಾದ್ರೆ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
Comments