ಶಾಕಿಂಗ್ ನ್ಯೂಸ್ : ಹಾಡಹಗಲೇ ಫುಟ್ ಪಾತ್ ನಲ್ಲಿ ಅಟ್ಟಹಾಸ ಮೆರೆದ ಕಾಮುಕ

ಸಾರ್ವಜನಿಕರು ನೋಡುತ್ತಿದ್ದರು ಲೆಕ್ಕಿಸದೆ ಕಾಮುಕನೊಬ್ಬ ಮಹಿಳೆಯ ಮೇಲೆ ಫುಟ್‍ಪಾತ್ ಮೇಲೆ ಅತ್ಯಾಚಾರ ಎಸಗಿದ್ದಾನೆ. ಆದರೆ ಸಹಾಯಕ್ಕೆ ಯಾವ ಸಾರ್ವಜನಿಕರು ಸಹ ಸಹಾಯಕ್ಕೆ ಬಾರದೇ ಆ ಅಮಾನೀಯ ಕೃತ್ಯವನ್ನು ವಿಡಿಯೋ ಮಾಡಿರುವಂತಹ ಶಾಕಿಂಗ್ ಘಟನೆ ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ನಡೆದಿದೆ.
ವಿಡಿಯೋ ಆಧಾರದ ಮೇಲೆ ಆರೋಪಿಯನ್ನು 21 ವರ್ಷದ ಗಂಜಿ ಶಿವ ಎಂದು ಗುರುತಿಸಲಾಗಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ. ಅತ್ಯಾಚಾರ ಎಸಗುವ ಸಂದರ್ಭದಲ್ಲಿ ಆತ ಕಂಠ ಪೂರ್ತಿ ಕುಡಿದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಸಂತ್ರಸ್ತೆ ಭಾನುವಾರ ಸುಮಾರು ಮಧ್ಯಾಹ್ನ 2 ಗಂಟೆಗೆ ವಿಶಾಖಪಟ್ಟಣದ ರೈಲ್ವೇ ನಿಲ್ದಾಣದ ಫುಟ್‍ಪಾತ್‍ನಲ್ಲಿ ಮರದ ಪಕ್ಕ ಕುಳಿತ್ತಿದ್ದರು. ಈ ಸಂದರ್ಭದಲ್ಲಿ ಆರೋಪಿ ಶಿವ ಏಕಾಏಕಿ ಆಕೆಯ ಬಳಿ ಬಂದು ಅಸಭ್ಯವಾಗಿ ವರ್ತಿಸಿದ್ದಾನೆ. ಬಲವಂತವಾಗಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯವನ್ನು ಎಸಗಿದ್ದಾನೆ. ಸ್ಥಳದಲ್ಲಿ ಹಲವಾರು ಜನರು ಓಡಾಡುತ್ತಿದ್ದರೂ ಸಂತ್ರಸ್ತೆ ಸಹಾಯ ಮಾಡುವಂತೆ ಕೇಳಿಕೊಂಡಿದ್ದಾರೆ. ಆದರೆ ಮಾನವೀಯತೆಯೇ ಇಲ್ಲದಂತೆ ಯಾರೊಬ್ಬರು ಆಕೆಗೆ ಸಹಾಯ ಮಾಡಲು ಮುಂದಾಗಿಲ್ಲ. ಘಟನೆ ನಡೆದ ಸ್ಥಳದಲ್ಲಿದ್ದ ಆಟೋ ಚಾಲಕ ಆರೋಪಿ ಎಸಗುತ್ತಿದ್ದ ಕೃತ್ಯವನ್ನು ತನ್ನ ಫೋನಿನಲ್ಲಿ ರೆಕಾರ್ಡ್ ಮಾಡಿದ್ದಾನೆ. ಕೃತ್ಯವನ್ನು ನೋಡಿದ ಯಾರೋ ಒಬ್ಬರು ಪೊಲೀಸ್ ಕಂಟ್ರೋಲ್ ರೂಮ್‍ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.
Comments