2ನೇ ಪಾಕಿಸ್ತಾನ ಹುಟ್ಟು ಹಾಕೋಕೆ ಆಗುತ್ತಾ? : ದೇವೇಗೌಡ

24 Oct 2017 2:46 PM | General
545 Report

ಬಳ್ಳಾರಿ: ಮಹದಾಯಿ ವಿಚಾರದಲ್ಲಿ ನಾನು ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ಮಾತನಾಡಿದ್ದೇನೆ. ಆದರೆ ಪ್ರಧಾನಿ ಅವರು ಕಣ್ಣಿದ್ದು ಕುರುಡರಾಗಿ, ಕಿವಿ ಇದ್ದು ಕಿವುಡರಾಗಿದ್ದಾರೆ. ಅದಕ್ಕೆ ನಾವೇನೂ ಮಾಡಕ್ಕಾಗಲ್ಲ. ಹೀಗಾಗಿ ಎರಡೂ ರಾಷ್ಡ್ರೀಯ ಪಕ್ಷಗಳಿಂದ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ತಿಳಿಸಿದ್ದಾರೆ.

ಮಂಗಳವಾರ ಬಳ್ಳಾರಿ ಹೂವಿನಹಡಗಲಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಟಿಪ್ಪು ಜಯಂತಿ ವಿಷಯ ಮತ್ತು ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.ಟಿಪ್ಪು ಜಯಂತಿ ವಿಷಯದಲ್ಲಿ ಅನಗತ್ಯ ಪೈಪೋಟಿ ನಡೆಯುತ್ತಿದೆ. ಈ ವಿಷಯದಲ್ಲಿ ಬಿಜೆಪಿಯವರು ಅನಗತ್ಯ ಅತಿರೇಕಕ್ಕೆ ಹೋಗಬಾರದು. ಟಿಪ್ಪು ಜಯಂತಿ ಬಗ್ಗೆ ಪರ, ವಿರೋಧ ಚರ್ಚೆ ಅಗತ್ಯವಿಲ್ಲ ಎಂದು ಹೇಳಿದರು.ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ವಿರುದ್ಧ ವಾಗ್ದಾಳಿ ನಡೆಸಿದ ದೇವೇಗೌಡರು ಮುಸ್ಲಿಮರ ಓಟು ನನಗೆ ಬೇಕಾಗಿಲ್ಲ ಎಂದು ಹೇಳೋದು ಸರಿಯಲ್ಲ. ಇದು ಪ್ರಜಾಪ್ರಭುತ್ವ ವಿರೋಧಿ ಹೇಳಿಕೆಯಾಗುತ್ತದೆ. ಹಾಗಾದ್ರೆ ಮುಸ್ಲಿಂ, ಕ್ರೈಸ್ತರನ್ನು ಎಲ್ಲಿಗೆ ಕಳುಹಿಸುತ್ತೀರಾ? 2ನೇ ಪಾಕಿಸ್ತಾನ ಹುಟ್ಟು ಹಾಕೋಕೆ ಆಗುತ್ತಾ? ಎಂದು ಪ್ರಶ್ನಿಸಿದರು.

Edited By

Shruthi G

Reported By

Shruthi G

Comments