ಕೇಂದ್ರ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ ದೇವೇಗೌಡ

ಬೆಂಗಳೂರು: ಕೇಂದ್ರ ಸರ್ಕಾರ ನನ್ನನ್ನು ಕೇವಲವಾಗಿ ನಡೆಸಿಕೊಳ್ತಿದೆ. ಮಾಜಿ ಪ್ರಧಾನಿ ಎನ್ನುವ ಕನಿಷ್ಠ ಗೌರವವನ್ನೂ ಕೊಡುತ್ತಿಲ್ಲ ಎಂದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಆಕ್ರೋಶ ಹೊರಹಾಕಿದರೆ .
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಲೋಕಸಭೆಯಲ್ಲಿ ರೈತರ ಸಮಸ್ಯೆಗಳ ಬಗ್ಗೆ ಚರ್ಚಿಸಲು ನನಗೆ ಅವಕಾಶ ಕೊಡುತ್ತಿಲ್ಲ. ಸಂಸತ್ತಿನಲ್ಲಿ ಸಂಖ್ಯೆಯ ಆಧಾರದಲ್ಲಿ ಸಮಯಾವಕಾಶ ನೀಡುತ್ತಿದ್ದು, 2-3 ನಿಮಿಷ ಮಾತ್ರ ಅವಕಾಶ ಲಭಿಸುತ್ತಿದೆ ಎಂದಿದ್ದಾರೆ.ಇದರಿಂದ ಬೇಸರಗೊಂಡು ರಾಜೀನಾಮೆಗೆ ನಿರ್ಧಾರ ಮಾಡಿದ್ದೆ. ಆದರೆ ನನ್ನ ಕ್ಷೇತ್ರದ ಜನರ ಒತ್ತಾಯದ ಮೇರೆಗೆ ನಿರ್ಧಾರದಿಂದ ಹಿಂದೆ ಬಂದಿದ್ದೇನೆ. ರೈತರ ಸಮಸ್ಯೆ ನಿವಾರಣೆಗೆ ಜಂಥರ್ ಮಂಥರ್ ನಲ್ಲಿ ಧರಣಿ ಕೂರುತ್ತೇನೆ.
Comments