ಸಚಿವ ಅನಂತಕುಮಾರ್ ಹೆಗಡೆ ಹೇಳಿಕೆಗೆ ಗುಡುಗಿದ ದೇವೇಗೌಡ್ರು
ಬೆಂಗಳೂರು : ಸಚಿವ ಅನಂತಕುಮಾರ್ ಹೆಗಡೆ ಹೇಳಿಕೆಯೇ ಅಪ್ರಬುದ್ಧ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಶನಿವಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಟಿಪ್ಪುಸುಲ್ತಾನ್ ಜಯಂತಿ ಆಹ್ವಾನ ಪತ್ರಿಕೆಯಲ್ಲಿ ನನ್ನ ಹೆಸರು ಬಳಸಬೇಡಿ ಎಂದು ಅನಂತಕುಮಾರ್ ಹೆಗಡೆ ನೀಡಿದ್ದ ಪ್ರಕಟಣೆಗೆ ಪ್ರತಿಕ್ರಿಯಿಸಿದ ಅವರು, ಕೇಂದ್ರ ಸಚಿವರೊಬ್ಬರಿಗೆ ಇಂಥ ಧೋರಣೆ ಸರಿಯಲ್ಲ. ಮುಸ್ಲಿಮರನ್ನು ವಿರೋಧ ಮಾಡಿಯೇ ನಾನು ಸಚಿವನಾಗಿದ್ದೇನೆ ಎಂದು ಹೆಗಡೆ ಅವರು ಹೇಳುತ್ತಾರೆ. ಹಾಗಿದ್ದರೆ ಪ್ರಮಾಣ ವಚನ ಸ್ವೀಕಾರ ಮಾಡುವ ಸಂದರ್ಭದಲ್ಲಿ ಏನು ಹೇಳಿದ್ದರು ಎಂದು ಪ್ರಶ್ನಿಸಿದ್ದಾರೆ.ದೇಶದಲ್ಲಿರುವ ಮುಸ್ಲಿಮರನ್ನು ಕೈ ಬಿಡುವುದು ಅಷ್ಟು ಸಲೀಸಲ್ಲ. ಭಾರತದಲ್ಲಿರುವ ಕೋಟ್ಯಂತರ ಮಂದಿ ಮುಸ್ಲಿಮರನ್ನು ಇಲ್ಲಿಂದ ಓಡಿಸಬೇಕೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದರು.ಅನಂತಕುಮಾರ್ ಹೆಗಡೆ ಅವರು ಟಿಪ್ಪು ಹೆಸರನ್ನು ಎತ್ತದೆ ಮತ್ತೊಮ್ಮೆ ಟೀಕೆ ಮಾಡಿದ್ದಾರೆ. ಟಿಪ್ಪು ಮತಾಂಧ, ಅತ್ಯಾಚಾರಿ ಇತ್ಯಾದಿಯಾಗಿ ಕರೆದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಕೂಡ ಮಾಡಿದ್ದಾರೆ. ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಕೂಡ ತಾವು ಟಿಪ್ಪು ಜಯಂತಿಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಹೇಳಿದ್ದು, ಬಿಜೆಪಿಯ ಹಲವು ಮುಖಂಡರ ಧೋರಣೆ ಇದೇ ಆಗಿದೆ.
Comments