'ತಮಿಳು' ಚಿತ್ರ ನಿಷೇಧಿಸುವಂತೆ ಪ್ರತಿಭಟನೆ
ಚೆನ್ನೈ : ಖ್ಯಾತ ತಮಿಳು ಇಳಯ ದಳಪತಿ ವಿಜಯ್ ಅಭಿಮಾನಿಗಳು ಕನ್ನಡಿಗೊಬ್ಬನಿಗೆ ಥಳಿಸುವ ಬಗ್ಗೆ ಆರ್ ಟಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನೆಯ ಬಳಿಕ ತಮಿಳು ಚಿತ್ರ ನಿಷೇಧಕ್ಕಾಗಿ ಕರವೇ ಪ್ರತಿಭಟನೆ ನಡೆಸುತ್ತಿದೆ.
ಚೆನ್ನೈ : ಖ್ಯಾತ ತಮಿಳು ಇಳಯ ದಳಪತಿ ವಿಜಯ್ ಅಭಿಮಾನಿಗಳು ಕನ್ನಡಿಗೊಬ್ಬನಿಗೆ ಥಳಿಸುವ ಬಗ್ಗೆ ಆರ್ ಟಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನೆಯ ಬಳಿಕ ತಮಿಳು ಚಿತ್ರ ನಿಷೇಧಕ್ಕಾಗಿ ಕರವೇ ಪ್ರತಿಭಟನೆ ನಡೆಸುತ್ತಿದೆ. ವಿಜಯ್ ಅಭಿನಯದ ಮೇರ್ಸಲ್ ಚಿತ್ರದ ಪ್ರದರ್ಶನ ಕಾಣುತ್ತಿದ್ದ ರಾಧಾಕೃಷ್ಣ ಚಿತ್ರಮಂದಿರದ ಬಳಿ ಬುಧುವಾರ ಘಟನೆ ನಡೆದಿದೆ ಎನ್ನಲಾಗಿದೆ.
ಘಟನೆ ನಡೆದ ಕೂಡಲೇ ಪ್ರವೀಣ್ ಶೆಟ್ಟಿ ಬಣದ ನೂರಾರು ಕರವೇ ಕಾರ್ಯಕರ್ತರು ಚಿತ್ರಮಂದಿರದ ಹೊರಗೆ ಜಮಾವಣೆಗೊಂಡು ಪ್ರತಿಭಟನೆ ನಡೆಸಿದ್ದಾರೆ. ಚಿತ್ರ ಪ್ರದರ್ಶನ ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿದರು. 4 ಗಂಟೆಯ ಚಿತ್ರ ಪ್ರದರ್ಶನವನ್ನು ಸ್ಥಗಿತಗೊಳಿಸುವುದಾಗಿ ಚಿತ್ರಮಂದಿರದ ಮಾಲೀಕ ಹೇಳಿದ ಬಳಿಕವಷ್ಟೇ ಪ್ರತಿಭಟನೆ ಹಿಂಪಡೆದುಕೊಳ್ಳಲಾಗಿದೆ. ಹತ್ತಕ್ಕೂ ಹೆಚ್ಚು ಉದ್ರಿಕ್ತರು ಥಳಿಸಿರುವುದಾಗಿ ವರದಿಯಾಗಿದ್ದು, ತಮಿಳು ಭಾಷೆಯಲ್ಲಿ ಅವ್ಯಾಚ್ ವಾಗಿ ಬೈದಿರುವುದಾಗಿ ಹಲ್ಲೆಗೊಳಗಾದ ಯುವಕ ಹೇಳಿಕೊಂಡಿದ್ದಾನೆ.
Comments