ಫೇಸ್ ಬುಕ್, ವಾಟ್ಸ್ ಆ್ಯಪ್ ನಲ್ಲಿ ಫೋಟೋ ಪ್ರಕಟಿಸಲು ಅವಕಾಶವಿಲ್ಲ

ಸಹಾರನ್ ಪುರ: ಸಾಮಾಜಿಕ ಮಾಧ್ಯಮಗಳಲ್ಲಿ ಮುಸ್ಲಿಂಮರು ಫೋಟೋ ಪ್ರಕಟಿಸದಂತೆ ಉತ್ತರಪ್ರದೇಶದ ಇಸ್ಲಾಮಿಕ್ ಶಿಕ್ಷಣ ಸಂಸ್ಥೆ ದಾರುಲ್ ಉಲೂಮ್ ದೇವಬಂಧ್ ಫತ್ವಾ ಹೊರಡಿಸಿದೆ. ಮುಸ್ಲಿಂ ಸಮುದಾಯದ ಮಹಿಳೆ, ಪುರುಷ ಹಾಗೂ ಅವರ ಕುಟುಂಬದ ಯಾವುದೇ ಸದಸ್ಯರ ಫೋಟೋಗಳನ್ನು ಫೇಸ್ ಬುಕ್ , ಟ್ವಿಟರ್ ಹಾಗೂ ಇನ್ ಸ್ಟಾಗ್ರಾಮ್ ಸೇರಿದಂತೆ ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸುವಂತಿಲ್ಲ. ಇದಕ್ಕೆ ಇಸ್ಲಾಂ ನಲ್ಲಿ ಅವಕಾಶವಿಲ್ಲ ಎಂದು ದಾರೂಲ್ ದೇವಬಂದ್ ಹೊರಡಿಸಿರುವ ಆದೇಶವನ್ನು ದಾರೂಲ್ ಇಫ್ತಾ ಪ್ರಕಟಿಸಿದೆ.
ಇಸ್ಲಾಂ ನಲ್ಲಿ ಇದಕ್ಕೆ ಅವಕಾಶವಿಲ್ಲ ಎಂದು ಫತ್ವಾದಲ್ಲಿ ಹೇಳಲಾಗಿದೆ. ಮುಸ್ಲಿಂ ಮಹಿಳೆಯರು ಹುಬ್ಬು ಟ್ರಿಮ್ ಅಥವಾ
ರೂಪರೇಷೆಗೊಳಿಸುವುದನ್ನು ನಿಷೇಧಿಸಿ ಇದೇ ಅ. 9ರಂದು ಫತ್ವಾ ಹೊರಡಿಸಲಾಗಿದೆ ಎಂದು ಎಎನ್ ಐ ವರದಿ ಮಾಡಿದೆ.
Comments