ಕೈಮಗ್ಗ ಉತ್ಪನ್ನದಾರರಿಗೆ  ಭರವಸೆ ನೀಡಿದ  ದೇವೇಗೌಡ್ರು

19 Oct 2017 1:55 PM | General
385 Report

ಬೆಂಗಳೂರು: ಕೈಮಗ್ಗ ಉತ್ಪನ್ನಗಳ ಕರಮುಕ್ತಕ್ಕೆ ಆಗ್ರಹಿಸಿ ರಂಗಕರ್ಮಿ ಪ್ರಸನ್ನ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿದ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಹೋರಾಟಕ್ಕೆ ಬೆಂಬಲ ಸೂಚಿಸಿದ್ದು, ಉಪವಾಸ ಸತ್ಯಾಗ್ರಹ ಕೈ ಬಿಡುವಂತೆ ಮನವಿ ಮಾಡಿದ್ದಾರೆ.

ಈ ವೇಳೆ ಮಾತನಾಡಿದ ದೇವೇಗೌಡ ಅವರು, ‘ಕೈ ಮಗ್ಗ ಹಾಗೂ ಗುಡಿ ಕೈಗಾರಿಕೆಗಳಲ್ಲಿ ತಯಾರಾದ ವಸ್ತುಗಳನ್ನು ಎಲ್ಲಾ ವರ್ಗದ ಹಾಗೂ ಪ್ರದೇಶದ ಜನರು ಬಳಸುತ್ತಾರೆ.  ಇಂತಹ ಕೈಮಗ್ಗ ಉತ್ಪನ್ನಗಳ ಮೇಲೆ ಕೇಂದ್ರ ಸರ್ಕಾರ ಜಿಎಸ್‌ಟಿ ತೆರಿಗೆ ವಿಧಿಸುವುದರಿಂದ ಕೈಮಗ್ಗ ಉತ್ಪನ್ನಗಳಿಂದಲೇ ಬದುಕು ಕಟ್ಟಿಕೊಂಡಿರುವ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಲಿವೆ’ ಎಂದು ಹೇಳಿದ್ದಾರೆ.

ಜಿಎಸ್‌ಟಿ ಜಾರಿಗೆ ತಂದಿರುವುದರ ಬಗ್ಗೆ ಕೇಂದ್ರ ಸರ್ಕಾರ ಹೆಮ್ಮೆ ಪಡುತ್ತದೆ. ಆದರೆ ಇದರಿಂದಾಗುವ ಅನಾಹುತಗಳನ್ನು ಕೇಂದ್ರ ಸರ್ಕಾರ ಯೋಚನೆ ಮಾಡಬೇಕು. ಅಲ್ಲದೇ ಇದು ಸಂಸದರಾದ ನಮ್ಮ ಕರ್ತವ್ಯವೂ ಹೌದು. ಈ ಸಂಬಂಧ ಕೂಡಲೇ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಈ ವಿಚಾರವನ್ನು ಗಮನಕ್ಕೆ ತರುತ್ತೇವೆ ಎಂದು ಭರವಸೆ ನೀಡಿದ್ದಾರೆ.

 

Edited By

Shruthi G

Reported By

Shruthi G

Comments