ಭತ್ತದ ಗದ್ದೆಯಲ್ಲಿ ಕಾಣಿಸಿಕೊಂಡ ಮೊಸಳೆಮರಿ

19 Oct 2017 1:38 PM | General
504 Report

ಕೊಪ್ಪಳ: ಭತ್ತದ ಗದ್ದೆಯಲ್ಲಿ ಸುಮಾರು 2 ತಿಂಗಳ ಮೊಸಳೆ ಮರಿ ಕಾಣಿಸಿಕೊಂಡಿರುವ ಘಟನೆ ಜಿಲ್ಲೆಯ ಗಂಗಾವತಿ ತಾಲೂಕಿನ ಹಗೇದಾಳ ಗ್ರಾಮದಲ್ಲಿ ನಡೆದಿದೆ.

ಗದ್ದೆಯಲ್ಲಿ ಬುಧವಾರ ಸಾಯಂಕಾಲ ಕಳೆ ತೆಗೆಯುತ್ತಿದ್ದ ವೇಳೆ ಮಹಿಳೆಯರಿಗೆ ಮೊಸಳೆ ಮರಿ ಕಾಣಿಸಿದೆ. ಮೊಸಳೆ ಮರಿ ಕಂಡ ತಕ್ಷಣ ಮಹಿಳೆಯರು ಭಯಭೀತರಾಗಿ ಓಡಿ ಬಂದಿದ್ದಾರೆ. ನಂತರ ಗ್ರಾಮಸ್ಥರಿಗೆ ವಿಚಾರ ತಿಳಿಸಿದ್ದಾರೆ.

ಗ್ರಾಮಸ್ಥರು ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದರು. ನಂತರ ಸ್ಥಳಕ್ಕೆ ಬಂದ ಪೊಲೀಸರು ಸ್ಥಳೀಯರ ಸಹಕಾರದೊಂದಿಗೆ ಮೊಸಳೆ ಮರಿಯನ್ನು ಸೆರೆಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ.

Courtesy: Public tv

Comments