ಎಟಿಎಂ ನಲ್ಲಿ ಸಿಗ್ತಿದೆ 200 ರೂ. ನೋಟ್

18 Oct 2017 10:45 AM | General
429 Report

2000 ರೂ. ನೋಟ್ ಗೆ ಚಿಲ್ಲರೆ ಸಮಸ್ಯೆ ಎದುರಾದ ಕಾರಣ, 200 ರೂ. ನೋಟ್ ಪರಿಚಯಿಸಲಾಗಿದೆ. ಆದರೆ, 200 ರೂ. ನೋಟ್ ಪೂರ್ಣ ಪ್ರಮಾಣದಲ್ಲಿ ಇನ್ನೂ ಚಲಾವಣೆಗೆ ಬಂದಿಲ್ಲ. ಕೆಲವು ಕಡೆ ಮಾತ್ರ ಈ ನೋಟ್ ಚಲಾವಣೆಯಲ್ಲಿದೆ. ಎ.ಟಿ.ಎಂ.ಗಳಲ್ಲಿ 200 ರೂ. ನೋಟ್ ಬರುತ್ತಿಲ್ಲ. 200 ರೂ. ನೋಟ್ ತುಂಬಲು ಎ.ಟಿ.ಎಂ.ಗಳನ್ನು ಮತ್ತೆ ಸಿದ್ಧಪಡಿಸಬೇಕಿದೆ.

ಕಳೆದ ವರ್ಷ ನವೆಂಬರ್ ನಲ್ಲಿ ದೊಡ್ಡ ಮೊತ್ತದ ನೋಟ್ ಬ್ಯಾನ್ ಮಾಡಿದ ಬಳಿಕ, 500 ರೂ., 2000 ರೂ. ನೋಟ್ ಚಲಾವಣೆಗೆ ತರಲಾಗಿದೆ. ಎ.ಟಿ.ಎಂ. ಕ್ಯಾಸೆಟ್ ಗಳನ್ನು(ಹಣವನ್ನು ಹಿಡಿದಿಟ್ಟುಕೊಳ್ಳುವ ಸಣ್ಣ ಪೆಟ್ಟಿಗೆ) 200 ರೂ. ಕರೆನ್ಸಿ ನೋಟ್ ಗಳ ಆಕಾರಕ್ಕೆ ಅನುಗುಣವಾಗಿ ಜೋಡಿಸಬೇಕಿದೆ. ಇದಕ್ಕೆ ಸಾಕಷ್ಟು ಸಮಯಾವಕಾಶ ಬೇಕಿರುವುದರಿಂದ ಬ್ಯಾಂಕ್ ಗಳು ಎ.ಟಿ.ಎಂ.ಗಳನ್ನು ಸಿದ್ಧಗೊಳಿಸಲು ಹೆಚ್ಚಿನ ಆಸಕ್ತಿ ತೋರುತ್ತಿಲ್ಲ. ಎ.ಟಿ.ಎಂ.ಗಳನ್ನು 200 ರೂ. ನೋಟ್ ತುಂಬಲು ಅನುಗುಣವಾಗಿ ಸಿದ್ಧಪಡಿಸುವ ಕಾರ್ಯ ಪ್ರಗತಿಯಲ್ಲಿದ್ದು, ಎಲ್ಲವೂ ಅಂದುಕೊಂಡಂತೆ ನಡೆದಲ್ಲಿ ವರ್ಷಾಂತ್ಯಕ್ಕೆ ಎ.ಟಿ.ಎಂ.ಗಳಲ್ಲಿ 200 ರೂ. ನೋಟ್ ಸಿಗಲಿದೆ.

Edited By

Suresh M

Reported By

Madhu shree

Comments