ವೀರಶೈವ-ಲಿಂಗಾಯತ ಬೇರೆ ಬೇರೆ ಅಲ್ಲ- ಪೇಜಾವರ್ ಶ್ರೀಗಳು

17 Oct 2017 11:48 PM | General
502 Report

ವೀರಶೈವರು ಮತ್ತು ಲಿಂಗಾಯುತರು ಒಂದಾಗಿದ್ದರೆ ಬಲ ಬರುತ್ತದೆ ಎಂದು ಉಡುಪಿ ಶ್ರೀಕೃಷ್ಣ ಮಠದ ಪೇಜಾವರ ಶ್ರೀಗಳು ಸಲಹೆ ನೀಡಿದ್ದಾರೆ.

ಲಿಂಗಾಯುತರು ಹಿಂದುಗಳಲ್ಲ ಅನ್ನುತ್ತಾರೆ. ಶಿವನೇ ಸರ್ವೋತ್ತಮ ಎನ್ನುತ್ತಾರೆ. ಎಲ್ಲಾ ಹಿಂದುಗಳು ಶಿವನ ಪೂಜೆ ಮಾಡುತ್ತಾರೆ. ಪಂಚಾಕ್ಷರಿ ಜಪ, ಲಿಂಗ ಪೂಜೆ ಮಾಡುತ್ತಾರೆ. ಲಿಂಗಾಯುತರು ಹಿಂದುಗಳಲ್ಲವಾದರೇ ಮತ್ಯಾರು? ಉತ್ತರ ಕೊಡಿ ಎಂದು ತಿಳಿಸಿದ್ದಾರೆ.
 
ವೀರಶೈವ ಲಿಂಗಾಯತಪ್ರತ್ಯೇಕ ಧರ್ಮ ವಿಚಾರ ಕುರಿತಂತೆ ಅಂತರಿಕ ವಿಷಯದಲ್ಲಿ ಹಸ್ತಕ್ಷೇಪ ಮಾಡಲು ಬಯಸುವುದಿಲ್ಲ. ಆದರೆ ವೀರಶೈವ ಲಿಂಗಾಯುತರು ಒಂದಾಗಿ ಇರುವುದೇ ಸೂಕ್ತ ಎನ್ನುವುದು ನನ್ನ ವ್ಯಯಕ್ತಿಕ ಅಭಿಪ್ರಾಯ ಎಂದು ಹೇಳಿದ್ದಾರೆ.
 
ವೀರಶೈವರು ಮತ್ತು ಲಿಂಗಾಯುತರು ಬೇರೆ ಬೇರೆಯಾಗುವುದರಿಂದ ಯಾವುದೇ ಸಾಧನೆಯಾಗುವುದಿಲ್ಲ. ಒಂದಾಗಿರುವುದು ಸೂಕ್ತ ಎನ್ನುವುದೇ ನನ್ನ ನಿಲುವು ಎಂದು ಪೇಜಾವರ ಶ್ರೀಗಳು ತಿಳಿಸಿದ್ದಾರೆ.

Edited By

venki swamy

Reported By

Sudha Ujja

Comments