ಕರೀನಾ ಕಪೂರ್ ಬಗೆಗಿನ ಸ್ಫೋಟಕ ಮಾಹಿತಿ ಬಹಿರಂಗ



ನಟಿ ಕರೀನಾ ಕಪೂರ್ ಈಗ ಮಗುವೊಂದರ ತಾಯಿ. ಸೈಫ್ ಆಲಿ ಖಾನ್‌ರನ್ನು ವರಿಸಿರುವ ಕರೀನಾಗೆ ಮುದ್ದಾದ ಗಂಡು ಮಗು ಸಹ ಇದೆ. ಕರೀನಾ ತನ್ನ ಮಗನಿಗೆ ತೈಮೂರ್ ಆಲಿ ಖಾನ್ ಎಂದು ಹೆಸರಿಟ್ಟಿದ್ದಾರೆ. ಸದ್ಯಕ್ಕೆ ಸೈಫ್ ಮತ್ತು ಕರೀನಾ ದಾಂಪತ್ಯ ಜೀವನ ಯಾವುದೇ ಅಡ್ಡಿ ಆತಂಕ ಇಲ್ಲದಂತೆ ಸಾಗುತ್ತಿದೆ. ಆದರೆ ಇದೀಗ ಇವರ ದಾಂಪತ್ಯ ಜೀವನದಲ್ಲಿ ಬಿರುಗಾಳಿ ಎಬ್ಬಿಸುವಂತಹ ಸ್ಪೋಟಕ ಮಾಹಿತಿ ಬಹಿರಂಗವಾಗಿದೆ.
ಈ ಮಾಹಿತಿಯನ್ನು ಬಹಿರಂಗಪಡಿಸಿರುವುದು ಸ್ವಯಂಘೋಷಿತ ನಟ, ನಿರ್ಮಾಪಕ ಹಾಗೂ ಸಿನಿವಿಮರ್ಶಕ ಕಮಾಲ್ ಆರ್ ಖಾನ್. ಟ್ವಿಟ್ಟರ್‌ನಲ್ಲಿ ಸದಾ ಅವರಿವರನ್ನು ಕೆಣಕುತ್ತಾ, ಸಿಕ್ಕಾಪಟ್ಟೆ ಟ್ರೋಲ್ ಆಗುವ ವ್ಯಕ್ತಿಗಳಲ್ಲಿ ಈ ಕೆಆರ್‌ಕೆ ಸಹ ಒಬ್ಬರು. ಇದೀಗ ಕರೀನಾ ಜತೆಗೆ ತಮಗೆ 4 ವರ್ಷ ಸಂಬಂಧ ಇತ್ತು ಎಂದು ಹೇಳಿಕೊಂಡಿದ್ದಾರೆ.ಆದರೆ ಆ ಸಂಬಂಧವನ್ನು ಬಹಿರಂಗಪಡಿಸುವ ಯಾವುದೇ ಸಾಕ್ಷ್ಯಾಧಾರಗಳು ತಮ್ಮ ಬಳಿ ಇಲ್ಲ. ಇರುವುದು ಇದೊಂದೇ ಫೋಟೋ ಎಂದು ಹೇಳಿಕೊಂಡಿದ್ದಾನೆ. ಒಟ್ಟಾರೆ ಕಮಾಲ್ ಆರ್ ಖಾನ್ ಅವರ ಹೇಳಿಕೆ ಬಾಲಿವುಡ್ ವಲಯದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ.
Comments