ಸಾವನ್ನೇ ಗೆದ್ದು ಬದುಕಿ ಬಂದ ಬಾಲಕಿ

ನಗರದ ಈಜೀಪುರದ ಗುಂಡಪ್ಪ ಲೇಔಟ್ ನಲ್ಲಿ ಸೋಮವಾರ ಅಡುಗೆ ಅನಿಲ ಸಿಲಿಂಡರ್ ಸ್ಫೋಟಗೊಂಡು ಎರಡು ಅಂತಸ್ತಿನ ಕಟ್ಟಡ ಕುಸಿದು ಬಿದ್ದ ಪರಿಣಾಮವಾಗಿ ಅವಶೇಷಗಳಡಿ ಸಿಲುಕಿಕೊಂಡಿದ್ದ ಪುಟ್ಟ ಬಾಲಕಿ ಪವಾಡಸದೃಶವಾಗಿ ಪಾರಾಗಿದ್ದಾಳೆ. ಮೂರು ವರ್ಷದ ಪುಟ್ಟ ಕೂಸು ಸಂಜನಾಳನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಕಟ್ಟಡದ ಅವಶೇಷಗಳಡಿಯಿಂದ ಹೊರತೆಗೆದಿದ್ದಾರೆ.
ಗಾಯಗೊಂಡಿರುವ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಕೆ ಹೆತ್ತವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಕುಸಿದು ಬಿದ್ದಿರುವ ಕಟ್ಟಡದಲ್ಲಿ ವಾಸವಾಗಿದ್ದ ನಾಲ್ವರು ಮತ್ತು ಪಕ್ಕದ ಮನೆಯ ಒಬ್ಬರು ಮೃತಪಟ್ಟಿದ್ದಾರೆ. ಅಶ್ವಿನಿ, ಕಲಾವತಿ, ರವಿಚಂದ್ರನ್ ,ಶರವಣ್ ಮತ್ತು ಪಕ್ಕದ ಮನೆಯ ಆಂಧ್ರ ಮೂಲದ ವ್ಯಕ್ತಿಯೊಬ್ಬರು ಸಾವಿಗೀಡಾಗಿದ್ದಾರೆ. ಕಟ್ಟಡದ ಅವಶೇಷಗಳಡಿ ಸಿಲುಕಿ ಮೃತಪಟ್ಟವರ ಪೈಕಿ ನಾಲ್ವರ ಮೃತದೇಹವನ್ನು ಹೊರತೆಗೆಯಲಾಗಿದೆ. ಈ ಕಟ್ಟಡದಲ್ಲಿ ನಾಲ್ಕು ಕುಟುಂಬಗಳು ವಾಸವಾಗಿತ್ತು ಎಂದು ಮೂಲಗಳು ತಿಳಿಸಿವೆ. ಮೃತಪಟ್ಟವರ ಕುಟುಂಬಕ್ಕೆ ಸರಕಾರ ತಲಾ 5 ಲಕ್ಷ ರೂ. ಗಾಯಗೊಂಡವರಿಗೆ ಚಿಕಿತ್ಸೆಗಾಗಿ 50 ಸಾವಿರ ರೂ. ಪರಿಹಾರವನ್ನು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಘೋಷಿಸಿದ್ದಾರೆ.
Comments