ರಾಜ್ಯ ದೆಲ್ಲೆಡೆ ಧಾರಾಕಾರ ಮಳೆ ತಂದಿಟ್ಟ ಅವಾಂತರ
ಧಾರಾಕಾರ ಮಳೆಗೆ ಉತ್ತರ ಕರ್ನಾಟಕದಲ್ಲಿ ಮುಂದುವರೆದಿದೆ ಅವಾಂತರ. ಬೆಳಗಾವಿಯ ಬೆಂಚಳಿಯಲ್ಲಿ 30 ಕ್ಕೂ ಹೆಚ್ಚು ಮನೆಗಳ ಮೇಲ್ಚಾವಣೆ ಹಾಗು ಗೋಡೆ ಕುಸಿತ ಹಳೆಯ ಮನೆಗಳು , ಕಟ್ಟಡಗಳು ಬೀಳುವ ಭೀತಿಯಲ್ಲಿರುವ ಸ್ಥಳೀಯರು ಮನೆ ಹೊರಗೆ ಮಲಗಿದ್ದ ಕುಟುಂಬಸ್ಥರು ಅಪಾಯದಿಂದ ಪಾರು. ಇತ್ತ ಕೊಪ್ಪಳ ಜಿಲ್ಲೆಯ ಕುಷ್ಟಗಿಯಲ್ಲಿ ಮನೆಯ ಮೇಲ್ಚಾವಣೆ ಕುಸಿತ.
ಕೇಸೂರು ಗ್ರಾಮದಲ್ಲಿ ಮನೆಯ ಹರಾಜು ಮಲಗಿದ್ದ ಕುಟುಂಬ. ಇನ್ನೂ ಸ್ಥಳಕ್ಕೆ ಬಾರದ ಅಧಿಕಾರಿಗಳು.ಕಳೆದ 24 ಗಂಟೆಗಳಲ್ಲಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಬಿದ್ದ ಮಳೆಯ ಪ್ರಮಾಣ ಇಲ್ಲಿದೆ. ಮನೆಯ ಮೇಲ್ಛಾವಣಿ ಕುಸಿದ ಪರಿಣಾಮ ಒಂದೇ ಕುಟುಂಬದ ಮೂವರು ಪ್ರಾಣ ಕಳೆದುಕೊಂಡ ಮನಕಲಕುವ ಘಟನೆ ಗದಗ ಜಿಲ್ಲೆಯ ಗಜೇಂದ್ರಗಡದಲ್ಲಿ ನಡದೆದಿದೆ. ಮೃತರನ್ನು ಮಾಬುಬೀ ಮುಚ್ಚಾಲಿ (50), ಮೊಮ್ಮಗಳಾದ ನಾಜಮೀನ್ (8), ಮುಸ್ಕಾನ್ (6) ಎಂದು ಗುರುತಿಸಲಾಗಿದೆ.
ಉಡುಪಿಯ ಕೊಲ್ಲೂರಿನಲ್ಲಿ 18 ಸೆಂ.ಮೀ. ಮಳೆಯಾಗಿ ಅತ್ಯಂತ ಹೆಚ್ಚು ಮಳೆಯಾದ ದಾಖಲೆ ಬರೆದಿದ್ದರೆ ಉಡುಪಿಯ ಕಾರ್ಕಳ ಮತ್ತು ಕೋಟದಲ್ಲಿ 13 ಸೆಂ.ಮೀ. ಮಳೆಯಾಗಿದೆ. ಮೂಡಬಿದಿರೆ, ಕುಂದಾಪುರದಲ್ಲಿ ತಲಾ 10 ಸೆಂ.ಮೀ., ಹೊಸಕೋಟೆ, 9 ಸೆಂ.ಮೀ., ಶ್ರವಣಬೆಳಗೋಳ 8 ಸೆಂ.ಮೀ., ಹಾವೇರಿ, ರಾಣೆಬೆನ್ನೂರು, ಬರಗೂರುಗಳಲ್ಲಿ 7 ಸೆಂ.ಮೀ. ಮಳೆಯಾಗಿದೆ.
ಇದರೊಂದಿಗೆ ಚಿಕ್ಕಮಗಳೂರು, ಶಿವಮೊಗ್ಗ, ಉತ್ತರ ಕನ್ನಡ ಸೇರಿದಂತೆ ಲೆನಾಡು, ಅರೆಮಲೆನಾಡು ಪ್ರದೇಶಗಳಲ್ಲಿ ಸಾಧಾರಣ ಮಳೆಯಾಗಿದೆ.
Comments