ಕಳವಾಗಿದ್ದ ದಿಲ್ಲಿ ಮುಖ್ಯಮಂತ್ರಿಯ ಕಾರು ಪತ್ತೆ
ತನ್ನ ಕಾರು ಕಳವಾದ ಮರುದಿನವೇ ಕೇಜ್ರಿವಾಲ್ ಅವರು ದಿಲ್ಲಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಲ್ ಅವರಿಗೆ ಪತ್ರ ಬರೆದು ತನ್ನ ಕಾರು ಕಳವು ಪ್ರಕರಣವು ರಾಷ್ಟ್ರ ರಾಜಧಾನಿಯಲ್ಲಿ ಬಿಗಡಾಯಿಸುತ್ತಿರುವ ಕಾನೂನು ಸುವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಹೇಳಿದ್ದರು.
ದಿಲ್ಲಿ ಸೆಕ್ರಟೇರಿಯಟ್ ಆವರಣದಿಂದ ಗುರುವಾರ ಕಳವಾಗಿದ್ದ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ನೀಲಿ ಬಣ್ಣದ ವ್ಯಾಗನ್ ಆರ್ ಕಾರು ರಾಜಧಾನಿ ಸಮೀಪದ ಗಾಝಿಯಾಬಾದ್ ನಲ್ಲಿ ಪತ್ತೆಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಇಲ್ಲಿಯವರೆಗೆ ಯಾರನ್ನೂ ಬಂಧಿಸಲಾಗಿಲ್ಲ. ಕಾರು ಕಳವಾದ ಸ್ಥಳದಲ್ಲಿರುವ ಸಿಸಿಟಿವಿ ಕ್ಯಾಮರಾ ದಾಖಲೆಗಳ ಮುಖಾಂತರ ಆರೋಪಿಯನ್ನು ಪತ್ತೆ ಹಚ್ಚುವ ಕಾರ್ಯವನ್ನು ಪೊಲೀಸರು ಆರಂಭಿಸಿದ್ದು, ಆರೋಪಿಯ ಚಿತ್ರಗಳನ್ನು ಪೊಲೀಸರು ಈಗಾಗಲೇ ವಿವಿಧ ಠಾಣೆಗಳಿಗೆ ರವಾನಿಸಿದ್ದಾರೆ. ''ಕಾರು ಕಳವಾಗಿರುವುದು ಒಂದು ಸಣ್ಣ ಸಂಗತಿ. ಆದರೆ ಸೆಕ್ರಟೇರಿಯಟ್ ಆವರಣದಲ್ಲಿನ ಕಾರು ಕಳೆದು ಹೋಗಿರುವುದು ಕುಸಿದಿರುವ ಕಾನೂನು ಸುವ್ಯವಸ್ಥೆಯ ಬಗ್ಗೆ ಹೇಳುತ್ತಿದೆ'' ಎಂದು ಕೇಜ್ರಿವಾಲ ಪತ್ರ ತಿಳಿಸಿದೆ. ಹರ್ಯಾಣದ ಹಿರಿಯ ಎಎಪಿ ನಾಯಕ ನವೀನ್ ಜೈಹಿಂದ್ ಈ ಕಾರು ಕಳವು ಪ್ರಕರಣವನ್ನು ಬೇಧಿಸಲು ಸಹಾಯ ಮಾಡಿದವರಿಗೆ ನಗದು ಬಹುಮಾನ ಘೋಷಿಸಿದ್ದರು. ಈ ಕಾರಿನ ಜತೆ ನಮಗೆ ಭಾವನಾತ್ಮಕ ಸಂಬಂಧವಿದೆ ಎಂದೂ ಹೇಳಿದ್ದರು. 2014ರ ಚುನಾವಣೆ ಪ್ರಚಾರ ಕಾರ್ಯಕ್ಕಾಗಿ ನವೀನ್ ಈ ಕಾರನ್ನು ಕೇಜ್ರಿವಾಲ್ ಅವರಿಂದ ಎರವಲು ಪಡೆದಿದ್ದರು.
Comments