ಆಧಾರ್ ಯೋಜನೆಯಿಂದ ಸರ್ಕಾರಕ್ಕೆ 900 ಕೋಟಿ ರೂ ಉಳಿತಾಯ
ವಾಷಿಂಗ್ಟನ್ : ಭಾರತ ಸರ್ಕಾರದ ಆಧಾರ್ ಕಾರ್ಡ್ ಯೋಜನೆಯಲ್ಲಿ ಈಗಾಗಲೆ ಒಂದು ಶತ ಕೋಟಿ ಜನರಿಗೆ ಕಾರ್ಡ್ ವಿತರಿಸಲಾಗಿದ್ದು, ಇದರಿಂದಾಗಿ ಫಲಾನುಭವಿಗಳ ಸೋಗಿನಲ್ಲಿ ವಂಚನೆ ಮಾಡುತ್ತಿದ್ದವರನ್ನು ಗುರುತಿಸಿ ಅದನ್ನು ಪರಿಣಾಮಕಾರಿಯಾಗಿ ತಡೆಯುವ ಮೂಲಕ ಸರ್ಕಾರ ಬರೋಬ್ಬರಿ ಒಂಭತ್ತು ಶತ ಕೋಟಿ ಡಾಲರ್ (900 ಕೋಟಿ ರೂ.) ಹಣ ಉಳಿತಾಯ ಮಾಡಿದೆ ಎಂದು ಗುರುತಿನ ಚೀಟಿ ಜನಕ ನಂದನ್ ನಿಲೇಕಣಿ ಹೇಳಿದ್ದಾರೆ.
ಹಿಂದಿನ ಯುಪಿಎ ಸರ್ಕಾರ ಆರಂಭಿಸಿದ್ದ ಈ ಮಹತ್ವದ ಯೋಜನೆಯನ್ನು ಪ್ರಸ್ತುತ ಪ್ರಧಾನಿ ನರೇಂದ್ರ ಮೋದಿ ಮತ್ತು ಹಣಕಾಸು ಸಚಿವ ಅರುಣ್ ಜೇಟ್ಲಿ ನೇತೃತ್ವದ ಎನ್‍ಡಿಎ ಸರ್ಕಾರ ಕೂಡ ಮುಂದುವರಿಸಿದ್ದು, ಇದರಿಂದ ಅತ್ಯಂತ ಉತ್ತಮವಾದ ರೀತಿಯಲ್ಲಿ ಪ್ರಯೋಜನವಾಗಿದೆ ಎಂದು ಇನ್ಫೋಸಿಸ್ ಅಧ್ಯಕ್ಷ (ಎನ್‍ಇ) 62ರ ಹರೆಯದ ನಂದನ್ ನಿಲೇಕಣಿ ತಿಳಿಸಿದ್ದಾರೆ.
Comments