ಮಹಿಳೆಯರು ಶಬರಿಮಲೈ ದೇಗುಲ ಪ್ರವೇಶ ವಿಚಾರ: ಮಹಿಳೆಯರ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದ ಸುಪ್ರಿಂ
ನವದೆಹಲಿ: ಪ್ರಸಿದ್ಧಿ ಶಬರಿಮಲೈ ಅಯ್ಯಪ್ಪಸ್ವಾಮಿ ದೇಗುಲವನ್ನು ಮಹಿಳೆಯರು ಪ್ರವೇಶಿಸಬೇಕೆ ಅಥವಾ ಬೇಡವೇ ಎಂದು ಮುಂದಿನ ದಿನಗಳಲ್ಲಿ ಸುಪ್ರಿಂನ ಸಾಂವಿಧಾನಿಕ ಪೀಠ ನಿರ್ಧರಿಸಲಿದೆ.
ನವದೆಹಲಿ: ಪ್ರಸಿದ್ಧಿ ಶಬರಿಮಲೈ ಅಯ್ಯಪ್ಪಸ್ವಾಮಿ ದೇಗುಲವನ್ನು ಮಹಿಳೆಯರು ಪ್ರವೇಶಿಸಬೇಕೆ ಅಥವಾ ಬೇಡವೇ ಎಂದು ಮುಂದಿನ ದಿನಗಳಲ್ಲಿ ಸುಪ್ರಿಂನ ಸಾಂವಿಧಾನಿಕ ಪೀಠ ನಿರ್ಧರಿಸಲಿದೆ. ದೇಗುಲ ಪ್ರವೇಶಕ್ಕೆ ಮಹಿಳೆಯರಿಗೆ ನಿಷಿದ್ಧ ಎಂಬ ಆಡಳಿತ ಮಂಡಳಿ ನಿರ್ಧಾರ
ಮಹಿಳೆಯರ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗುತ್ತದೆಯೇ ಎಂಬುದನ್ನು ಪಿರಿಶೀಲಿಸಬೇಕಿದೆ ಎಂದು ಮುಖ್ಯ ನ್ಯಾಯಮೂರ್ತಿಗಳ ನ್ಯಾಯಪೀಠ ಅಭಿಪ್ರಾಯ ಪಟ್ಟಿದೆ.
ಜತೆಗೆ ಮಹಿಳೆಯರ ಪ್ರವೇಶವನ್ನು ನಿರ್ಬಂಧಿಸುವ ಹಕ್ಕು ದೇಗುಲಕ್ಕೆ ಇದೆಯಾ? ದೇಗುಲದ ಈ ನಡೆ ಸಾಂವಿಧಾನಿಕ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗುತ್ತದೆಯಾ? ಮಹಿಳೆಯರಿಗೆ ದೇಗುಲ ಪ್ರವೇಶ ನಿಷೇಧಿಸಿರುವುದು ತಾರತಮ್ಯವೇ ಎಂಬ ಅಂಶಗಳನ್ನು ಸಾಂವಿಧಾನಿಕ ಪೀಠ ಪರಿಶೀಲಿಸಲಿದೆ.
Comments