ರಾಜ್ಯಕ್ಕೆ ಮೊದಲ ಮಹಿಳಾ ಮಹಾನಿರ್ದೇಶಕರು ಆಗ್ತಾರಾ ನೀಲಮಣಿ ?

ಬೆಂಗಳೂರು: ರಾಜ್ಯದ ನೂತನ ಪೊಲೀಸ್ ಮಹಾನಿರ್ದೇಶಕರಾಗಿ ನೀಲಮಣಿ ಎನ್. ರಾಜು ಆಯ್ಕೆಯಾಗುವುದು ಬಹುತೇಕ ನಿಶ್ಚಿತವಾಗಿದೆ. ಹಾಲಿ ಮಹಾನಿರ್ದೇಶಕರಾಗಿ ಆರ್ .ಕೆ ದತ್ತಾ ಅವರು ನಿವೃತ್ತಿಯಾಗುತ್ತಿದ್ದಾರೆ.
ಬೆಂಗಳೂರು: ರಾಜ್ಯದ ನೂತನ ಪೊಲೀಸ್ ಮಹಾನಿರ್ದೇಶಕರಾಗಿ ನೀಲಮಣಿ ಎನ್. ರಾಜು ಆಯ್ಕೆಯಾಗುವುದು ಬಹುತೇಕ ನಿಶ್ಚಿತವಾಗಿದೆ. ಹಾಲಿ ಮಹಾನಿರ್ದೇಶಕರಾಗಿ ಆರ್ .ಕೆ ದತ್ತಾ ಅವರು ನಿವೃತ್ತಿಯಾಗುತ್ತಿದ್ದಾರೆ. ಈ ಹುದ್ದೆಗೆ ಬೇರೆಯವರನ್ನು ನೇಮಕ ಮಾಡುವ
ಸಂಬಂಧ ಅ. 16ರಂದು ಸರ್ಕಾರ ಉನ್ನತ ಮಟ್ಟದ ಸಭೆ ಕರೆದಿದೆ. ಅಂದು ಹೊಸಪೊಲೀಸ್ ಮಹಾನಿರ್ದೇಶಕರು ಆಯ್ಕೆಯಾಗಲಿವೆ.
ಒಂದು ವೇಳೆ ಅವರು ಪೊಲೀಸ್ ಮಹಾನಿರ್ದೇಶಕರಾಗಿ ನೀಲಮಣಿ ಎನ್ .ರಾದು ಡಿಜಿಪಿ ಆಗಿ ಆಯ್ಕೆಯಾದರೆ ರಾಜ್ಯದ ಮೊದಲ ಮಹಿಳೆ ಆಗಲಿದ್ದಾರೆ. ಸದ್ಯ ಸೇವಾ ಹಿರಿತನದ ಆಂತರಿಕ ಭದ್ರತಾ ವಿಭಾಗದ ಡಿಜಿಯಾಗಿರುವ ನೀಲಮಣಿ ಎನ್. ರಾಜು ಅವರ ಹೆಸರು ಮುಂಚೂಣಿಯಲ್ಲಿದೆ.
ಅದೇ ಕಾಲಕ್ಕೆ ಹಿರಿಯ ಅಧಿಕಾರಿಗಳಾದ ಎಂ.ಎನ್ ರೆಡ್ಡಿ ಹಾಗೂ ಕಿಶೋರ್ ಚಂದ್ರ ಹೆಸರು ಪೊಲೀಸ್ ಮಹಾನಿರ್ದೇಶಕರ ಹುದ್ದೆಯ ರೇಸ್ ನಲ್ಲಿ ಕಾಣಿಸಿಕೊಂಡಿದೆ. ಸೇವಾ ಹಿರಿತನ ಹೊಂದಿದವರನ್ನು ಆದ್ಯತೆ ನೀಡಬೇಕು ಎಂದು ಸುಪ್ರಿಂಕೋರ್ಟ್ ಹೇಳಿರುವುದರಿಂದ ಮತ್ತು ಚುನಾವಣೆಯ ವರ್ಷವಾದ್ದರಿಂದ ತುಂಬ ಗೊಂದಲಗಳಿಗೆ ಅವಕಾಶ ಮಾಡಿಕೊಡಬಾರದು. ಆದ್ದರಿಂದ ಸೇವಾ ಹಿರಿತನ ಹೊಂದಿರುವ ನೀಲಮಣಿ ಅವರನ್ನೇ ಪೊಲೀಸ್ ಮಹಾನಿರ್ದೇಶಕರನ್ನಾಗಿ ನೇಮಕ ಮಾಡಲು ಸರ್ಕಾರ ಬಯಸಿದೆ ಎನ್ನಲಾಗಿದೆ.
Comments