ಉಪನ್ಯಾಸಕರಿಗೆ ದೀಪಾವಳಿ ಬಂಪರ್ ಆಫರ್ !
ಉಪನ್ಯಾಸಕರ ವೇತನವನ್ನು ಏಳನೇ ವೇತನ ಆಯೋಗದ ಶಿಫಾರಸ್ಸಿಗೆ ಅನುಗುಣವಾಗಿ ಶೇಕಡ 22- 28ರವರೆಗೆ ಹೆಚ್ಚಿಸಲು ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ. ಈ ಹೊಸ ವೇತನ ಪರಿಷ್ಕರಣೆ 2016ರ ಜನವರಿ 1ರಿಂದ ಪೂರ್ವಾನ್ವಯವಾಗುವಂತೆ ಜಾರಿಗೆ ಬರಲಿದೆ. ಇದರಿಂದ ವಾರ್ಷಿಕ ಸರ್ಕಾರಿ ಬೊಕ್ಕಸಕ್ಕೆ 9800 ಕೋಟಿ ರೂ ಹೊರೆಯಾಗಲಿದೆ.
ದೇಶದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಅಧೀನದ ಕಾಲೇಜು ಮತ್ತು ವಿಶ್ವವಿದ್ಯಾನಿಲಯಗಳಲ್ಲಿ ಕರ್ತವ್ಯ ನಿರ್ವಹಿಸುವ ಸುಮಾರು ಎಂಟು ಲಕ್ಷ ಉಪನ್ಯಾಸಕರಿಗೆ ಭರ್ಜರಿ ದೀಪಾವಳಿ ಗಿಫ್ಟ್ ಘೋಷಿಸಲಾಗಿದೆ. ಉಪನ್ಯಾಸಕರ ವೇತನವನ್ನು ಏಳನೇ ವೇತನ ಆಯೋಗದ ಶಿಫಾರಸ್ಸಿಗೆ ಅನುಗುಣವಾಗಿ ಶೇಕಡ 22- 28ರವರೆಗೆ ಹೆಚ್ಚಿಸಲು ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ. ಪ್ರಸ್ತುತ ಪರಿಷ್ಕರಣೆ ಅನ್ವಯ ಪ್ರಾಧ್ಯಾಪಕರ ವೇತನ ಅವರ ಪ್ರವೇಶ ಅವಧಿಯ ವೇತನಕ್ಕೆ ಅನುಗುಣವಾಗಿ 10,400 ರೂಪಾಯಿಗಳಿಂದ 49,800 ರೂಪಾಯಿಗಳ ವರೆಗೆ ಹೆಚ್ಚಲಿದೆ" ಎಂದು ಸರ್ಕಾರಿ ಹೇಳಿಕೆ ತಿಳಿಸಿದೆ. ಶಿಕ್ಷಣವನ್ನು ಸುಧಾರಿಸುವುದು ಹಾಗೂ ಉತ್ತಮ ಮಾನವ ಸಂಪನ್ಮೂಲವನ್ನು ಶಿಕ್ಷಣ ಕ್ಷೇತ್ರಕ್ಕೆ ಆಕರ್ಷಿಸುವುದು ನಮ್ಮ ಉದ್ದೇಶ. ಇದು ಉಡುಗೊರೆಯಲ್ಲ. ಈಗಾಗಲೇ ಸಲ್ಲಿಸುತ್ತಿರುವ ಸೇವೆಗೆ ಒದಗಿಸುತ್ತಿರುವ ನ್ಯಾಯ ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.
ಈ ನಿರ್ಧಾರದಿಂದ ಯುಜಿಸಿಯಿಂದ ಅಥವಾ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯಿಂದ ಅನುದಾನ ಪಡೆಯುವ 106 ವಿಶ್ವವಿದ್ಯಾನಿಲಯಗಳ 7.58 ಲಕ್ಷ ಬೋಧಕ ಸಿಬ್ಬಂದಿಗೆ ಲಾಭವಾಗಲಿದೆ. ರಾಜ್ಯ ಸರ್ಕಾರಗಳು ಅನುದಾನ ನೀಡುತ್ತಿರುವ 329 ವಿಶ್ವವಿದ್ಯಾನಿಲಯಗಳು ಹಾಗೂ 12,912 ಸರ್ಕಾರಿ ಹಾಗೂ ಖಾಸಗಿ ಅನುದಾನಿತ ಕಾಲೇಜು ಉಪನ್ಯಾಸಕರು ಇದರ ಸೌಲಭ್ಯ ಪಡೆಯಲಿದ್ದಾರೆ. ಇದರ ಜತೆಗೆ 119 ಕೇಂದ್ರೀಯ ಅನುದಾನಿತ ಐಐಟಿ, ಐಐಎಸ್ಸಿ, ಐಐಎಂ, ಐಐಎಸ್‌ಇಆರ್, ಐಐಐಟಿ ಹಾಗೂ ಎನ್‌ಐಟಿಇ ಸಂಸ್ಥೆಗಳ ಸಿಬ್ಬಂದಿಗೂ ಈ ವೇತನ ಹೆಚ್ಚಳ ಅನ್ವಯವಾಗುತ್ತದೆ.
Comments