ಪಟಾಕಿ ನಿಷೇಧದ ವಿಚಾರದಲ್ಲಿ 'ರಾಜಕೀಯ' ಮಾಡಲಾಗುತ್ತಿದೆ - ರಾಜ್ ಠಾಕ್ರೆ

ಮುಂಬೈ: ಪಟಾಕಿ ಮಾರಾಟ ನಿಷೇಧವನ್ನು ಮಹಾರಾಷ್ಟ್ರದಲ್ಲಿ ಬ್ಯಾನ್ ಮಾಡಲಾಗಿದೆ. ಈ ಉದ್ದೇಶದಿಂದ ದೆಹಲಿಯಲ್ಲು ಬ್ಯಾನ್ ಆಗುತ್ತದೆ ಎನ್ನಲಾಗುತ್ತದೆ.ಇದನ್ನು ವಿರೋಧಿಸುತ್ತಿರುವ ಶಿವಸೇನೆ ಮತ್ತು ಎಂಎನ್ ಎಸ್ ಪ್ರತಿಭಟನೆ ಹಮ್ಮಿಕೊಂಡಿದೆ.
ಪಟಾಕಿ ನಿಷೇಧಕ್ಕೆ ಸಂಬಂಧಪಟ್ಟಂತೆ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮಹಾರಾಷ್ಟ್ರದಲ್ಲಿ ಸುಪ್ರಿಂ ಕೋರ್ಟ್ ಆದೇಶದ
ಪ್ರಕಾರ ನಿರ್ಧಾರ ಕೈಗೊಳ್ಳುವ ಬಗ್ಗೆ ಚಿಂತನೆಯಲ್ಲಿದ್ದಾರೆ. ಈ ಬಗ್ಗೆ ದೇವೇಂದ್ರ ಫಡ್ನವಿಸ್ ಜತೆಗೆ ಮಾತುಕತೆ ನಡೆಸಲಾಗುವುದು ಎಂದು ಸಚಿವ ರಾಮದಾಸ್ ಕದಂ ಕೂಡ ತಿಳಿಸಿದ್ದಾರೆ.
ಮಹಾರಾಷ್ಟ್ರ ನವನಿರ್ಮಾಣ ಸೇನೆ ಅಧ್ಯಕ್ಷ ರಾಜ್ ಠಾಕ್ರೆ ಹಿಂದು ಹಬ್ಬದಂದೇ ಇಂಥ ನಿಷೇಧಗಳು ಏಕೆ ಆಗುತ್ತವೆ ಎಂದು ಪ್ರಶ್ನಿಸಿದ್ದಾರೆ. ಪಟಾಕಿ ಬ್ಯಾನ್ ಬಗ್ಗೆ ನಮ್ಮದ್ದು ತೀವ್ರ ವಿರೋಧವಿದ್ದು, ಮೊದಲಿನಿಂದಲೂ ಆಚರಿಸಲ್ಪಡುತ್ತಿರುವ ದೀಪಾವಳಿಯನ್ನು ಈ ಬಾರಿ ಅದೇ ರೀತಿಯಾಗಿ ಆಚರಿಸುವಂತೆ ಕರೆ ನೀಡಿದ್ದಾರೆ.
Comments