ಪೊಲೀಸ್ ಅಧಿಕಾರಿಯೊಬ್ಬರು ಬೈಕ್ ಸವಾರನಿಗೆ ಕೈಮುಗಿತಿರೋದೇಕೆ?

ಕಾನೂನೂ ರಕ್ಷಕರು ಅವರ ಮುಂದೆ ಕ್ಷಮೆ ಯಾಚಿಸುವ ಫೋಟೋ ಬಹಳ ಮಂದಿಗೆ ಕುತೂಹಲವನ್ನುಂಟು ಮಾಡಿದೆ. ಫೋಟೋನಲ್ಲಿರುವ ಪೊಲೀಸ್ ಅಧಿಕಾರಿ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಮದಕಾಸಿರಾದ ಸರ್ಕಲ್ ಇನಸ್ಪೆಕ್ಟರ್ ಬಿ. ಶುಭ್ ಕುಮಾರ್.
ಸೋಶಿಯಲ್ ಮೀಡಿಯಾದಲ್ಲಿ ಮೇಲ್ಕಂಡ ಪೋಟೋ ವೈರಲ್ ಆಗಿದೆ. ಪೊಲೀಸ್ ಅಧಿಕಾರಿಯೊಬ್ಬರು ಬೈಕ್ ಸವಾರನಿಗೆ ಕೈಮುಗಿಯುತ್ತಿದ್ದಾರೆ. ಬೈಕ್'ನಲ್ಲಿರುವವರು ಯಾರೂ ಕೂಡಾ ಹೆಲ್ಮೆಟ್ ಧರಿಸಿದೇ ಕಾನೂನನ್ನು ಉಲ್ಲಂಘಿಸಿದ್ದಾರೆ. ಅದಾಗ್ಯೂ ಕಳೆದ ಸೋಮವಾರ ಶುಭ್ ಕುಮಾರ್ ಕರ್ತವ್ಯದಲ್ಲಿದ್ದಾಗ, ಬೈಕ್'ನಲ್ಲಿ ಇಬ್ಬರು ಮಕ್ಕಳ್ಳನ್ನು ಪೆಟ್ರೋಲ್ ಟ್ಯಾಂಕ್ ಮೇಲೆ ಹಾಗೂ ಇಬ್ಬರು ಮಹಿಳೆಯರನ್ನು ಹಿಂಬದಿ ಕೂರಿಸಿಕೊಂಡು, ಹೆಲ್ಮೆಟ್ ಇಲ್ಲದೇ ಬೈಕ್ ಚಲಾಯಿಸುತ್ತಿದ್ದ ಹನಮಂತರಾಯುಡುನನ್ನು ನೋಡಿದ್ದಾರೆ.ಆಗಷ್ಟೇ ರಸ್ತೆ ಸುರಕ್ಷತೆಯ ಬಗ್ಗೆ ಜನಜಾಗೃತಿ ಕಾರ್ಯಕ್ರಮವನ್ನು ನಡೆಸಿ ಬಂದಿದ್ದ ಶುಭ್ ಕುಮಾರ್'ರಿಗೆ ಈ ದೃಶ್ಯ ಸಹಿಸಲಾಗಲಿಲ್ಲ.
ತನ್ನ ಕುಟುಂಬವನ್ನು ಅಪಾಯಂಚಿನಲ್ಲಿಟ್ಟುಕೊಂಡು ಗಾಡಿ ಒಡಿಸುತ್ತಿದ್ದವನ ಮೇಲೆ ಕೋಪ ಬಂದರೂ, ಆತನ ಮಕ್ಕಳ ಹಾಗೂ ಕುಟುಂಬಸ್ಥರ ಮುಂದೆ ಅದನ್ನು ತೋರಿಸಿಕೊಳ್ಳುವುದು ಸರಿಯೆನಿಸಲಿಲ್ಲ. ಜನರು ಮೊದಲೇ ಪೊಲೀಸರ ಬಗ್ಗೆ ನಕಾರಾತ್ಮಕ ಅಭಿಪ್ರಾಯ ಹೊಂದಿರುತ್ತಾರೆ. ಸಿಟ್ಟನ್ನು ತೋರಿಕೊಂಡರೆ ಆ ಮುಗ್ಧ ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರಬಹುದು ಎಂದು ಅನಿಸಿತು. ಆದರೆ ಅವರ ತಪ್ಪನ್ನು ಅವರಿಗೆ ಮನದಟ್ಟುಮಾಡುವ ಅನಿವಾರ್ಯತೆಯೂ ಇತ್ತು. ಆದುದರಿಂದ ಕೈಜೋಡಿಸಿ, ಮಕ್ಕಳ, ಕುಟುಂಬದವರ ಸುರಕ್ಷತೆ ಬಗ್ಗೆ ರಸ್ತೆ ನಿಯಮಗಳನ್ನು ಪಾಲಿಸುವಂತೆ ಮನವಿ ಮಾಡಿಕೊಂಡೆ ಎಂದು ಶುಭ ಕುಮಾರ್ ಹೇಳಿದ್ದಾರೆ. ಪೊಲೀಸ್ ಇಲಾಖೆಯನ್ನು ಸೇರುವ ಮುಂಚೆ ಪ್ರಾಧ್ಯಾಪಕನಾಗಿದ್ದ ಶುಭಕುಮಾರ್, ಪೊಲೀಸರ ಬಗ್ಗೆ ಜನರು ಇಟ್ಟಿರುವ ಅಭಿಪ್ರಾಯ ಚೆನ್ನಾಗಿ ಬಲ್ಲರು. ಅದನ್ನು ಹೇಗೆ ಸರಿಪಡಿಸಬಹುದು ಎಂದೂ ತಿಳಿದಿರುವ ಅವರು, ದೇವಸ್ಥಾನಕ್ಕೆ ತೆರಳುತ್ತಿದ್ದದ ಆ ಕುಟುಂಬದವರಿಗೆ ಆಟೋವೊಂದನ್ನು ವ್ಯವಸ್ಥೆ ಮಾಡಿ ಕಳುಹಿಸಿಕೊಟ್ಟಿದ್ದಾರೆ.
Comments