ಮಕ್ಕಳ ತಿನಿಸಿಗೆ ಲಗ್ಗೆಯಿಟ್ಟ ಪಾಪಡಿ ಪ್ಲಾಸ್ಟಿಕ್ !
ಇಂದು ವಾಣಿಜ್ಯ ನಗರಿಯಲ್ಲಿ ಮಕ್ಕಳು ಇಷ್ಟಪಡುವ ಪಾಪಡಿ ತಿನಿಸು ಸಹ ಪ್ಲಾಸ್ಟಿಕ್ ಆಗಿ ಪರಿವರ್ತನೆಯಾಗಿದ್ದು ಸಾರ್ವಜನಿಕರಿಗೆ ಶಾಕ್ ಆಗಿದ್ದು ಸಾರ್ವಜನಿಕರು ಗಾಬರಿಯಾಗಿದ್ದಾರೆ. ರಾಸಾಯನಿಕ ಮತ್ತು ಪ್ಲಾಸ್ಟಿಕ್ ಮಿಶ್ರಿತ ಪಾಪಡಿಗಳು ನೋಡಲು ಉದ್ದವಾಗಿ, ಅತ್ಯಂತ ಆಕರ್ಷಕವಾಗಿದ್ದು ಇವುಗಳ ಆಕಾರ ಮತ್ತು ಬಣ್ಣಕ್ಕೆ ಮಕ್ಕಳು ಮರುಳಾಗುತ್ತಿದ್ದಾರೆ.
ಕಳೆದ ಕೆಲವು ತಿಂಗಳುಗಳ ಹಿಂದೆ ರಾಜ್ಯದ ವಿವಿಧೆಡೆ ಪ್ಲಾಸ್ಟಿಕ್ ಅಕ್ಕಿ, ಪ್ಲಾಸ್ಟಿಕ್ ಮೊಟ್ಟೆ, ಪ್ಲಾಸ್ಟಿಕ್ ಸಕ್ಕರೆ ಪತ್ತೆಯಾದ ಬಗ್ಗೆ ಸಾಕಷ್ಟು ಸುದ್ದಿಯಾಗಿ ಅವೆಲ್ಲ ಸುದ್ದಿ ಎನ್ನುವ ಮಾಹಿತಿಯನ್ನು ಖುದ್ದು ಆರೋಗ್ಯ ಇಲಾಖೆ ನೀಡಿತ್ತು, ಆದರೆ ಇದೀಗ ಪ್ಲಾಸ್ಟಿಕ್ ಪಾಪಡಿಗಳೂ ಸಹ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ. ಈ ಪಾಪಡಿಗಳನ್ನು ಶಾಲೆಗಳ ಅಕ್ಕ ಪಕ್ಕದಲ್ಲಿ ಎಗ್ಗಿಲ್ಲದೇ ಮಾರಾಟ ಮಾಡಲಾಗುತ್ತಿದೆ. ಸಾಮಾನ್ಯ ಪಾಪಡಿಗಳಿಗಿಂತ ಇವು ನೋಡಲು ಮತ್ತು ತಿನ್ನಲು ವಿಭಿನ್ನವಾಗಿವೆ. ತಿಂದ ಬಳಿಕ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತದೆಯಂತೆ. ಇನ್ನು ಇವುಗಳಿಗೆ ಬೆಂಕಿ ಹಚ್ಚಿದರೆ ಪ್ಲಾಸ್ಟಿಕ್ ಹಾಗೇ ಉರಿಯುತ್ತವೆ. ಜೊತೆಗೆ ಕೊನೆಯಲ್ಲಿ ಕೆಲ ತ್ಯಾಜ್ಯ ವಸ್ತುಗಳು ಉಳಿಯುತ್ತವೆ. ಹೀಗಾಗಿ ಇದರಲ್ಲಿ ಪ್ಲಾಸ್ಟಿಕ್ ಇದೆ ಎಂಬ ಮಾತುಗಳು ದಟ್ಟವಾಗಿ ಕೇಳಿ ಬರುತ್ತಿವೆ. ಇದು ಮಕ್ಕಳ ಮೇಲೆ ಪರಿಣಾಮ ಬೀರುವ ಮೊದಲು ಆಹಾರ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಾಗಿದೆ ಅಂತಾ ಸಾರ್ವಜನಿಕರು ಆಗ್ರಹಿಸಿದ್ದಾರೆ.
Comments