ಕಾಲು ಜಾರಿ ಕೆಂಡದ ರಾಶಿಗೆ ಬಿದ್ದ ಭಕ್ತ

10 Oct 2017 1:30 PM | General
469 Report

ಮೊಹರಂ ನಂತರ ಅದೇ ಮಾದರಿಯಲ್ಲಿ ನಡೆಯುವ ಕೌಡೇಪೀರ ಆಚರಣೆ ವೇಳೆ ಅಗ್ನಿ ಹಾಯಲಾಗುತ್ತೆ. ಈ ವೇಳೆ ಅಗ್ನಿ ಹಾಯುವಾಗ ಕಾಲು ತೊಡರಾಗಿ ಕೆಂಡದಲ್ಲಿ ಮೊದಲು ಖಾದರ್ ಸಾಬ್ ಬಿದ್ದಿದ್ದಾರೆ. ಅವರನ್ನು ರಕ್ಷಣೆ ಮಾಡಲು ಹೋದ ಖಾಜಾಸಾಬ್ ಅವರಿಗೂ ಸುಟ್ಟು ಗಾಯವಾಗಿವೆ.

ಕೌಡೇಪೀರ ಕೆಂಡದಲ್ಲಿ ಬಿದ್ದು ಇಬ್ಬರಿಗೆ ಸುಟ್ಟ ಗಾಯವಾಗಿರೋ ಘಟನೆ ಕೊಪ್ಪಳದಲ್ಲಿ ನಡೆದಿದೆ. ಗಂಗಾವತಿ ತಾಲೂಕಿನ ಹಿರೇಬೆಣಕಲ್ ಗ್ರಾಮದಲ್ಲಿ ಇಂದು ನಸುಕಿನ ಜಾವ ಈ ಘಟನೆ ಸಂಭವಿಸಿದೆ. ಚಿಕ್ಕ ಬೆಣಕಲ್ ಗ್ರಾಮದ ಖಾದರ್ ಸಾಬ್ ಹಾಗೂ ಜಮಪೂರ ಗ್ರಾಮದ ಖಾಜಾಸಾಬ್ ಗಾಯಗೊಂಡವರು.

Edited By

Shruthi G

Reported By

Madhu shree

Comments