ಹಿಂದೂಗಳು ತಮ್ಮ ಮನೆಯಲ್ಲಿ ತಲ್ವಾರ್ ಇಟ್ಟುಕೊಳ್ಳಬೇಕು ಹೇಳಿಕೆಗೆ ಆಕ್ರೋಶ

ಮಂಗಳೂರು: ಹಿಂದೂ ಮನೆಯಲ್ಲಿ ಕತ್ತಿ, ತಲ್ವಾರ್ ಅನ್ನು ಇಟ್ಟುಕೊಳ್ಳಬೇಕಾಗುತ್ತದೆ. ಆಯುಧವೆಂದರೆ ಪೆನ್ನು, ಪುಸ್ತಕಗಳಲ್ಲ, ಕತ್ತಿ, ಭರ್ಜಿ. ತಲ್ವಾರ್ ಆಯುಧಗಳಾಗಿವೆ ಎಂದು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಮಂಗಳೂರು: ಹಿಂದೂ ಮನೆಯಲ್ಲಿ ಕತ್ತಿ, ತಲ್ವಾರ್ ಅನ್ನು ಇಟ್ಟುಕೊಳ್ಳಬೇಕಾಗುತ್ತದೆ. ಆಯುಧವೆಂದರೆ ಪೆನ್ನು, ಪುಸ್ತಕಗಳಲ್ಲ, ಕತ್ತಿ, ಭರ್ಜಿ. ತಲ್ವಾರ್ ಆಯುಧಗಳಾಗಿವೆ ಎಂದು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ಉಸ್ತುವಾರಿ ಸಚಿವ ರಮಾನಾಥ್ ರೈ ಮುತಾಲಿಕ್ ವಿರುದ್ಧ ಏಕವಚನದಲ್ಲಿ ಆಕ್ಸೋಶ ವ್ಯಕ್ತಪಡಿಸಿದ್ದಾರೆ.
ಮಂಗಳೂರಿನ ಕದ್ರಿ ಮಂಜುನಾಥ್ ದೇವಸ್ಥಾನದ ಆವರಣದಲ್ಲಿ ಶ್ರೀರಾಮ ಸೇನೆ ಮತ್ತು ಮಹಿಳಾ ಘಟಕ ದುರ್ಗಾ ಸೇನೆ ವತಿಯಿಂದ ನಡೆದ ಮಾತೃಪೂಜನ ಕಾರ್ಯಕ್ರಮದಲ್ಲಿ ಮಹಿಳಾ ಘಟಕ ದುರ್ಗಾ ಸೇನೆ ವತಿಯಿಂದ ನಡೆದ ಮಾತೃಪೂಜನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಯಾವುದೇ ಹೆದರಿಕೆ ಇಲ್ಲದೇ ಪ್ರತಿಯೊಬ್ಬ ಹಿಂದುಗಳು ದೇಶರಕ್ಷಣೆಗೊಸ್ಕರ್ ಕತ್ತಿ, ತಲ್ವಾರ್ ಮನೆಯಲ್ಲಿ ಇಟ್ಟುಕೊಳ್ಳಬೇಕು ಎಂದು ಹೇಳಿದ್ದರು.
Comments