ರಾತ್ರೋರಾತ್ರಿ ಹುಟ್ಟಿಕೊಂಡಿದಾರೆ ಯಂಗ್ ಸ್ಟಾರ್ ದೇವರುಗಳು

09 Oct 2017 12:42 PM | General
449 Report

ಈ ಗ್ರಾಮದಲ್ಲಿ ರಾತ್ರೋರಾತ್ರಿ ಹುಟ್ಟಿಕೊಂಡಿವೆ ಹೊಸ ದೇವರುಗಳು . ಆ ದೇವರುಗಳ ಹೆಸರು ಕೇಳಿ ಇಡೀ ಗ್ರಾಮವೇ ತಬ್ಬಿಬ್ಬು .. ಗಿರಿರಂಗಪ್ಪ , ಆಂಜಿನೇಯ ಸ್ವಾಮಿ , ದೊಣ್ಣೆ ಬೈರಪ್ಪ, ದೇವರುಗಳು ರಾತ್ರೋರಾತ್ರಿ ಸೃಷ್ಟಿ . ಈ ಗ್ರಾಮದ ಮೂವರು ಯುವಕರ ಮೇಲೆ ಬರ್ತಿವೆಯಂತೆ ಮೂರೂ ದೇವರುಗಳು.

ಮೈಸೂರಿನ ನಂಜನಗೂಡು ತಾಲೂಕಿನ ತಾಯೂರಿನಲ್ಲಿ ಯಂಗ್ ದೇವರುಗಳು ಪ್ರತ್ಯಕ್ಷ ಕುಮಾರ್ ಮೈಮೇಲೆ ಬಿಳಿಗಿರಿ ರಂಗಪ್ಪ , ನಾರಾಯಣ ಸ್ವಾಮಿ ಮೈಮೇಲೆ ಆಂಜಿನೇಯ , ಶಿವೂ ಮೈಮೇಲೆ ದೊಣ್ಣೆ ವೀರಪ್ಪ ದೇವರು ಆವಾಹನೆ. ದೇವರ ಹೆಸರು ಹೇಳಿಕೊಂಡು ಹೆದರಿಸುತ್ತಿದ್ದಾರೆ. ಈ ಮೂವರು ಯುವಕರ ಈ ಕೃತ್ಯಕ್ಕೆ ಹಳ್ಳಿ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ಅಲ್ಲದೆ ಸಿಕ್ಕ ಸಿಕ್ಕ ಜನರನ್ನು ಹೊಡೆಯುವುದು , ದೇವರು ಬಂದಿದೆ ಎಂದು ಹೇಳಿಕೊಂಡು ಹಣವಸೂಲಿ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.

Edited By

Hema Latha

Reported By

Madhu shree

Comments