ಸಕ್ಕರೆ ಖಾಯಿಲೆ ರೋಗಿಗಳಿಗೆ ಗುಡ್ ನ್ಯೂಸ್

ನೀವು ಸಕ್ಕರೆ ಖಾಯಿಲೆಯಿಂದ ಬಳಲುತ್ತಿದ್ದು ನಿಮಗೆ ವೈದ್ಯರು ಪ್ರತಿ ನಿತ್ಯ ನಿಮಗೆ ಇನ್ಸುಲಿನ್ ತೆಗೆದುಕೊಳ್ಳುವುದಕ್ಕೆ ಸೂಚನೆ ನೀಡಿದ್ದು ಔಷಧಿಗಾಗಿ ಹೆಚ್ಚು ಹಣ ತೆತ್ತುವಲ್ಲಿ ನಿಮಗೆ ಬೇಸರವಾಗಿದ್ದರೆ ನಿಮಗೆ ಇಲ್ಲೊಂದು ಸಿಹಿ ಸುದ್ದಿ ಇದೆ.
ಹೌದು, ಬಹುಬೇಡಿಕೆಯ ಇನ್ಸುಲಿನ್ ಹಾಗೂ ರೇಬೀಸ್ ಲಸಿಕೆಗಳು ಪ್ರಧಾನ ಮಂತ್ರಿ ಜನ ಔಷಧಿ ಯೋಜನೆಯ ವ್ಯಾಪ್ತಿಗೆ ಬಂದಿದ್ದು, ಮೈಸೂರಿನಲ್ಲಿ ಎರಡೂ ಔಷಧಿಗಳು ಬಿಡುಗಡೆಯಾಗಿವೆ. ಇದೇ ವೇಳೆ 180 ರೂ.ಗಳ ಇನ್ಸುಲಿನ್ 71 ರೂ., 900 ರೂ.ಗಳ ಇನ್ಸುಲಿನ್ ಗ್ಲಾರ್ಜಿನ್ 266 ರೂ.ಗೆ ಲಭ್ಯವಾಗುತ್ತಿದೆ. 370 ರೂಗಳ ರೇಬಿಸ್ ಲಸಿಕೆಗೆ 166 ರೂ. ಮಾರಾಟ ಮಾಡಲಾಗುತ್ತಿದೆ. ಸೋಮವಾರದಿಂದ ದೇಶದ ಎಲ್ಲಾ ಜನೌಷಧಿ ಮಳಿಗೆಗಳಲ್ಲಿ ಈ ಔಷಧಿಗಳು ಲಭ್ಯವಾಗಲಿದ್ದು, ಮಧುಮೇಹಿಗಳಿಗಂತೂ ಬಹಳಷ್ಟು ಅನುಕೂಲವಾಗಲಿದೆ ಎನ್ನಲಾಗಿದೆ.
Comments