ಡಿಜಿಟಲ್ ಪೇಮೆಂಟ್ ಪ್ರೋತ್ಸಾಹಿಸಲು RBI ನಿಂದ ಹೊಸ ಯೋಜನೆ

07 Oct 2017 12:47 PM | General
340 Report

ಸದ್ಯದಲ್ಲೇ ನೀವು ಒಂದು ಮೊಬೈಲ್ ವಾಲೆಟ್ ನಿಂದ ಇನ್ನೊಂದಕ್ಕೆ ಹಣ ವರ್ಗಾಯಿಸಬಹುದು. ಪ್ರಿಪೇಯ್ಡ್ ಪೇಮೆಂಟ್ ನಲ್ಲಿ ಇಂಟರ್ ಆಪರೇಬಿಲಿಟಿಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಅವಕಾಶ ಕಲ್ಪಿಸುತ್ತಿದೆ. ಪಿಪಿಐನಲ್ಲಿ ಪ್ರಮುಖವಾಗಿ ಇ-ವಾಲೆಟ್, ಗಿಫ್ಟ್ ಕಾರ್ಡ್ಸ್ ಮತ್ತು ಮೀಲ್ ಕೂಪನ್ ಗಳನ್ನು ನಗದಿಗೆ ಪರ್ಯಾಯವಾಗಿ ಬಳಸಬಹುದು.

ಇನ್ನು 6 ತಿಂಗಳುಗಳೊಳಗಾಗಿ ಆರ್ ಬಿ ಐ, ಪಿಪಿಐ ಅನ್ನು ಇನ್ನೊಂದಷ್ಟು ಬದಲಾವಣೆಗಳೊಂದಿಗೆ ಜಾರಿಗೆ ತರಲಿದೆ. ಇದರಿಂದ ದೇಶದಲ್ಲಿ ಡಿಜಿಟಲ್ ಪೇಮೆಂಟ್ ಗೆ ಇನ್ನಷ್ಟು ಒತ್ತು ನೀಡಬಹುದು ಅನ್ನೋದು ಆರ್ ಬಿ ಐ ಲೆಕ್ಕಾಚಾರ.ಮೊಬೈಲ್ ವಾಲೆಟ್ ಗಳ ಬೆಳವಣಿಗೆಗೂ ಇದು ಸಹಕಾರಿಯಾಗಲಿದೆ. ಇದರಿಂದ ಮೊಬೈಲ್ ವಾಲೆಟ್ ಕಂಪನಿಗಳ ವಹಿವಾಟು ಕೂಡ ಇನ್ನಷ್ಟು ವಿಸ್ತರಿಸುವ ನಿರೀಕ್ಷೆ ಇದೆ. ಪೇಟಿಎಂ ಹಾಗೂ ಮೊಬಿಕ್ವಿಕ್ ಕಂಪನಿಗಳು ಆರ್ ಬಿ ಐ ನಿರ್ಧಾರವನ್ನು ಸ್ವಾಗತಿಸಿವೆ.

Edited By

Shruthi G

Reported By

Shruthi G

Comments