ಮೋದಿ ಒಂಟಿಯಾಗಿರ್ಬೇಡಿ, ನನ್ನನ್ನು ವಿವಾಹವಾಗಿ..!

ಓಂ ಶಾಂತಿ ಶರ್ಮಾ ಎಂಬ ಮಹಿಳೆ ಸೆಪ್ಟೆಂಬರ್ 8 ರಿಂದ ಜಂತರ್ಮಂತರ್ನಲ್ಲಿ ಧರಣಿ ಕುಳಿತಿದ್ದು, ನನ್ನ ಮಾನಸಿಕ ಸ್ಥಿತಿ ಸರಿಯಾಗಿಯೇ ಇದೆ. ನನಗೆ ಈ ಹಿಂದೆ ವಿವಾಹವಾಗಿದ್ದು, ಆದರೆ ನಮ್ಮ ಸಂಬಂಧ ಸರಿ ಹೋಗದ ಕಾರಣ ಇದೀಗ ಒಂಟಿಯಾಗಿದ್ದೇನೆ. ಮೋದಿ ಅವರೂ ನನ್ನ ಹಾಗೆ ಒಂಟಿಯಾಗಿದ್ದಾರೆ ಅವರು ನನ್ನನ್ನು ಮದುವೆಯಾಗಲಿ ಎಂದು ಹೇಳಿಕೊಂಡಿದ್ದಾಳೆ.
ಅತ್ಯಂತ ವಿಲಕ್ಷಣ ಘಟನೆಯೊಂದರಲ್ಲಿ ಜೈಪುರದ 40 ರ ಹರೆಯದ ಮಹಿಳೆಯೊಬ್ಬಳು ಪ್ರಧಾನಿ ನರೇಂದ್ರ ಮೋದಿ ಅವರನ್ನು ಮದುವೆಯಾಗಬೇಕೆಂಬ ಹಠದಲ್ಲಿ ದೆಹಲಿಯ ಜಂತರ್ಮಂತರ್ನಲ್ಲಿ ಕಳೆದೊಂದು ತಿಂಗಳಿನಿಂದ ಧರಣಿ ಕುಳಿತಿದ್ದಾಳೆ.ಈ ವಿಚಾರ ಕೇಳಿ ಜನರು ನಗುತ್ತಾರೆ ಎಂದು ನನಗೆ ಗೊತ್ತಿದೆ. ಈ ವಿಚಾರ ಕೇಳಿ ಜನರು ನಗುತ್ತಾರೆ ಎಂದು ನನಗೆ ಗೊತ್ತಿದೆ. ನಾವು ಹಿರಿಯರಿಗೆ ಸಹಕಾರ ಮಾಡುವುದು ನಮ್ಮ ಸಂಸ್ಕೃತಿ. ಚಿಕ್ಕಂದಿನಿಂದಲೂ ನಾನು ಹಿರಿಯರಿಗೆ ಗೌರವ ನೀಡಿಕೊಂಡು ಬಂದವಳು. ನಾನು ಮೋದಿ ಅವರ ಕೆಲಸದಲ್ಲಿ ನೆರವಾಗಬೇಕೆಂದು ಮದುವೆ ಮಾಡಿಕೊಳ್ಳಿ ಎಂದು ಬೇಡಿಕೊಳ್ಳುತ್ತಿದ್ದೇನೆ ಎಂದಿದ್ದಾಳೆ.
ಮೊದಲ ವಿವಾಹದಿಂದ ಪಡೆದ 20 ವರ್ಷದ ಮಗಳನ್ನೂ ಹೊಂದಿರುವ ಶರ್ಮಾ ಸಿರಿವಂತ ಮಹಿಳೆ. ಆಕೆಯ ಬಳಿ ಸಾಕಷ್ಟು ಹಣ ಮತ್ತು ಜಮೀನು ಇದೆ ಎನ್ನಲಾಗಿದೆ.ಮೋದಿ ಅವರು ಬಂದು ನನ್ನನ್ನು ಭೇಟಿಯಾಗುವ ವರೆಗೆ ನಾನು ಇಲ್ಲಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದಿದ್ದಾಳೆ. ಗುರುದ್ವಾರಗಳಲ್ಲಿ ಊಟ ಸೇವಿಸಿ, ಸಾರ್ವಜನಿಕ ಶೌಚಾಲಯಗಳನ್ನು ಬಳಸಿಕೊಂಡು ದಿನ ಕಳೆಯುತ್ತಿರುವ ಶಾಂತಿ ಶರ್ಮಾಗೆ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಸ್ಥಳ ಬಿಟ್ಟು ಬೇರೆ ಕಡೆ ಕೂರಲು ಆದೇಶಿಸಿದೆ.
Comments