ಗಾಂಧಿ ಹತ್ಯೆ ಮರು ತನಿಖೆ

ನವದೆಹಲಿ: ಮಹಾತ್ಮಾ ಗಾಂಧಿ ಹತ್ಯೆಗೆ ಸಂಬಂಧಿಸಿದಂತೆ ತನಿಖೆಯನ್ನು ಪುನರ ಆರಂಭಿಸುವಂತೆ ಸಲ್ಲಿಸಲಾಗಿದ್ದ ಮನವಿಗೆ ಸುಪ್ರಿಂ ಕೋರ್ಟ್ ಇವತ್ತು ಮಹತ್ವದ ಪ್ರಶ್ನೆಗಳನ್ನು ಎತ್ತಿದೆ.
ನವದೆಹಲಿ: ಮಹಾತ್ಮಾ ಗಾಂಧಿ ಹತ್ಯೆಗೆ ಸಂಬಂಧಿಸಿದಂತೆ ತನಿಖೆಯನ್ನು ಪುನರ ಆರಂಭಿಸುವಂತೆ ಸಲ್ಲಿಸಲಾಗಿದ್ದ ಮನವಿಗೆ ಸುಪ್ರಿಂ ಕೋರ್ಟ್ ಇವತ್ತು ಮಹತ್ವದ ಪ್ರಶ್ನೆಗಳನ್ನು ಎತ್ತಿದೆ. 15 ನಿಮಿಷಗಳ ಕಾಲ ಈ ಸಂಬಂಧ ವಿಚಾರಣೆ ನಡೆದಿದೆ. ನ್ಯಾಯಾಲಯ ಈ ಹಿಂದೆ ನಡೆಸಿದ್ದ ವಿಚಾರಣೆಯಲ್ಲಿ ಯಾವುದೇ ತೀರ್ಮಾನಕ್ಕೆ ಬಂದಿಲ್ಲ ಎಂದು ಅಭಿಪ್ರಾಯಪಟ್ಟಿದೆ. ನ್ಯಾಯಮೂರ್ತಿ ಶರ್ಮಾ, ಈ ಬಗ್ಗೆ ಸದ್ಯಕ್ಕೆ ಯಾವ ತೀರ್ಮಾನ ಕೈಗೊಳ್ಳಲು ಬರುವುದಿಲ್ಲ , ಮುಂದಿನ ವಿಚಾರಣೆಯನ್ನು ಅ,30ಕ್ಕೆ ನಡೆಸಲಾಗುತ್ತದೆ ಎಂದರು.
ಸಂಶೋಧನಾ ಮತ್ತು ಅಭಿನವ ಭಾರತ ಟ್ರಸ್ಟಿ ಆಗಿರುವ ಮುಂಬಯಿ ಮೂಲದ ಡಾ. ಪಂಕಜ್ ಫಾಡ್ನಿಸ್ ಸಲ್ಲಿಸಿದ ಅರ್ಜಿ ಇದಾಗಿದ್ದು, ಹಲವಾರು ದಾಖಲೆಗಳ ಜತೆಗೆ ಬಾಹ್ಯ ತನಿಖೆ ಯನ್ನು ಮರು ಪರಿಶೀಲಿಸುವಂತೆ ಅರ್ಜಿದಾರರು ಕೋರಿದ್ದಾರೆ. ಭಾರತ ಇತಿಹಾಸದಲ್ಲಿ ಇದು ಅತ್ಯಂತ ದೊಡ್ಡ ತಿರುವು ಆಗಲಿದೆ ಅಂತ ಹೇಳಲಾಗಿದೆ. ಹಿಂಧೂ ರಾಷ್ಟ್ರೀಯತೆಯ ಬಲ ಪಂಥೀಯ ನಾಥೂರಾಮ್ ವಿನಾಯಕ್ ಗೋಡ್ಸೆ ಇಂದ ಜನವರಿ 30, 1948ರಂದು ಗಾಂಧಿ ಗುಂಡೇಟಿಗೆ ಬಲಿಯಾಗಿದ್ದರು.
Comments