ಐಕ್ಯಾನ್ ಅಭಿಯಾನಕ್ಕೆ ನೊಬೆಲ್ ಶಾಂತಿ ಪುರಸ್ಕಾರ

06 Oct 2017 4:34 PM | General
480 Report

ಅಣ್ವಸ್ತ್ರಗಳನ್ನು ಪ್ರಯೋಗಿಸಿದ್ದೇ ಆದಲ್ಲಿ ಅದರಿಂದ ಮಾನವ ಜನಾಂಗ ಎದುರಿಸಬೇಕಾಗಬಹುದಾದ ಭಾರೀ ಅನಾಹುತದತ್ತ ಗಮನ ಸೆಳೆಯಲು ಹಾಗೂ ಇಂತಹ ಶಸ್ತ್ರಾಸ್ತ್ರಗಳಿಗೆ ಒಪ್ಪಂದ ಆಧರಿತ ನಿಷೇಧವನ್ನು ಸಾಧ್ಯವಾಗಿಸುವ ನಿಟ್ಟಿನಲ್ಲಿ ಅದು ಪಟ್ಟಿರುವ ಅಸಾಮಾನ್ಯ ಶ್ರಮವನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು 'ಐಕ್ಯಾನ್' ಸಂಘಟನೆಗೆ ನೀಡಲಾಗಿದೆ.

ಈ ವರ್ಷದ ನೊಬೆಲ್ ಶಾಂತಿ ಪುರಸ್ಕಾರವನ್ನು ವಿಶ್ವದಲ್ಲಿ ಅಣ್ವಸ್ತ್ರಗಳನ್ನು ಅಂತ್ಯಗೊಳಿಸಲು ಹೋರಾಡುತ್ತಿರುವ 'ಇಂಟರ್ ನ್ಯಾಷನಲ್ ಕ್ಯಾಂಪೇನ್ ಟು ಎಬಾಲಿಶ್ ನ್ಯೂಕ್ಲಿಯರ್ ವೆಪನ್ಸ್' (ಐಕ್ಯಾನ್) ಗೆದ್ದಿದೆ.ನೆಲ ಬಾಂಬುಗಳು ಹಾಗೂ ಇತರ ರಾಸಾಯನಿಕ ಅಸ್ತ್ರಗಳಿಗೆ ಅನ್ವಯವಾಗುವ ನಿಷೇಧವು ಅಣ್ವಸ್ತ್ರಗಳಿಗೆ ಅನ್ವಯಿಸುವುದಿಲ್ಲ ಎಂಬ ಅರ್ಥ ನೀಡುವ 'ಕಾನೂನಿನ ತೊಡಕನ್ನು' ನಿವಾರಿಸುವ ನಿಟ್ಟಿನಲ್ಲಿ 'ಐಕ್ಯಾನ್' ಎಂದೇ ಜನಪ್ರಿಯವಾಗಿರುವ ಈ ಜಿನೆವಾ ಮೂಲದ ಸಂಘಟನೆಯು ಶ್ರಮಿಸಿದೆ ಎಂದು ನಾರ್ವೆಯ ನೊಬೆಲ್ ಸಮಿತಿ ಹೇಳಿದೆ. ಪ್ರಶಸ್ತಿಯಂಗವಾಗಿ ಐಕ್ಯಾನ್ ಸಂಘಟನೆಗೆ 1.1 ಮಿಲಿಯನ್ ಡಾಲರ್ ನಗದು ಬಹುಮಾನ ದೊರೆಯಲಿದೆ. ಆಸ್ಟ್ರೇಲಿಯಾದಲ್ಲಿ ಮೊದಲು ಆರಂಭವಾದ ಈ ಸಂಘಟನೆ 2007ರಲ್ಲಿ ಆಸ್ಟ್ರಿಯಾದಲ್ಲಿ ಅಧಿಕೃತವಾಗಿ ಉದ್ಘಾಟನೆಗೊಂಡಿತು. ಸುಮಾರು 100 ದೇಶಗಳ ಎನ್‍ಜಿಒಗಳು ಈ ಸಂಘಟನೆಯಲ್ಲಿವೆ.

Edited By

Shruthi G

Reported By

Madhu shree

Comments